ಎಲೆಚುಕ್ಕಿ ರೋಗ ನಿಯಂತ್ರಣ ಕಾರ್ಯಾಗಾರ

9sdp2
Published on

ಸಿದ್ದಾಪುರ: ತಾಲೂಕಿನ ಭಾನ್ಕುಳಿಯ ಗೋಸ್ವರ್ಗದ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಶಿರಸಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಹರಾ ಫೌಂಡೇಷನ್ ಮುಂಬೈ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ಹಾಗೂ ಅಡಕೆ ಎಲೆಚುಕ್ಕಿ ರೋಗದ ನಿಯಂತ್ರಣ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.

ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಹಾಗೂ ವಿಜ್ಞಾನಿ ಡಾ. ರೂಪಾ ಪಾಟೀಲ ಕಾರ್ಯಾಗಾರ ಉದ್ಘಾಟಿಸಿ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಆಗುತ್ತಿರುವ ಲಾಭದ ಕುರಿತು ಮಾಹಿತಿ ನೀಡಿದರು.

ಡಾ. ಯಶಸ್ವಿನಿ ಶರ್ಮಾ ಎಲೆ ಚುಕ್ಕಿ ರೋಗದ ಲಕ್ಷಣ ಹಾಗೂ ಅದರ ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ಡಾ.ಬಿ.ಸಿ. ಕೊಲ್ಹಾರ ಅವರು ಮಣ್ಣು ಪರೀಕ್ಷೆಯಿಂದ ರೈತರಿಗೆ ಆಗುವ ಲಾಭ ಹಾಗೂ ಪರೀಕ್ಷೆಗೆ ಕಳಿಸುವ ಮಣ್ಣಿನ ಸಂಗ್ರಹಣೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಶ್ರೀ ಮಠದ ಕಾಮಧುಘಾ ಅಧ್ಯಕ್ಷ ಡಾ.ವೈ.ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಗೋಸ್ವರ್ಗ ಸಂಸ್ಥಾನದ ಆರ್.ಎಸ್. ಹೆಗಡೆ ಹರಗಿ, ರಾಮಚಂದ್ರಾಪುರಮಠದ ಸಂಶೋಧನಾ ಖಂಡದ ಶ್ರೀ ಸಂಯೋಜಕ ಗುರುರಾಜ ಪಡೀಲು ಉಪಸ್ಥಿತರಿದ್ದರು. ಡಿ.ಎಸ್.ಹೆಗಡೆ ಶಿರಸಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net