

ಬೆಳಗಾವಿ: ಯಾವುದೇ ಒಂದು ನಾಯಕತ್ವ ಶಕ್ತಿಯಲ್ಲ, ಅದೊಂದು ಜವಾಬ್ದಾರಿ, ಹೊಣೆಗಾರಿಕೆ ಇದ್ದಂತೆ. ಹೀಗಾಗಿ ಸಿಗುವ ಹುದ್ದೆಯನ್ನು ಜಾಗರೂಕದಿಂದ ನಿಭಾಯಿಸಬೇಕು ಎಂದು ದಕ್ಷಿಣ ಕೊಂಕಣ ಶಿಕ್ಷಣ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಮತ್ತು ಕ್ರೀಡಾಪಟು ಪ್ರಸಾದ ತೆಂಡೂಲ್ಕರ್ ಹೇಳಿದರು.
ಸಂಸ್ಥೆಯ ಆರ್ಪಿಡಿ ಕಾಲೇಜಿನಲ್ಲಿ ಮಂಗಳವಾರ ಜರುಗಿದ 2025&26ನೇ ಸಾಲಿನ ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ಆಡಳಿತ ಮಂಡಳಿ ಸದಸ್ಯೆ ಡಾ.ಧನಶ್ರೀ ಅಜಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಕೌನ್ಸಿಲ್ಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ವಿಭಾಗದ ನಿರ್ದೇಶಕ ಡಾ.ರಾಮಕೃಷ್ಣ ಎನ್. ಇತರರಿದ್ದರು.
ಪ್ರೊ.ಅಕ್ಷಯ ಹಿರೇಮಠ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಅಭಯ ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿ ಕೌನ್ಸಿಲ್ ಉಪಾಧ್ಯಕ್ಷ ಡಾ.ಎಸ್.ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಶರಯು ಪೋತ್ನಿಸ್ ನಿರೂಪಿಸಿದರು. ಆರೋಗ್ಯಪ್ಪ ವಂದಿಸಿದರು.
ಸಂಸ್ಥಾಪನಾ ದಿನಾಚರಣೆ: ಆರ್ಪಿಡಿ ಕಾಲೇಜಿನಲ್ಲಿ ಬುಧವಾರ ಎನ್ಎಸ್ಎಸ್ ಸಂಸ್ಥಾಪನಾ ದಿನಾಚರಣೆ ಹಾಗೂ 2025&26ನೇ ಸಾಲಿನ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು. ಪ್ರಾಚಾರ್ಯ ಡಾ.ಅಭಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ನಾಗರಾಜ ಕಾಳೆ, ಪ್ರೊ. ಇಂದಿರಾ ಹೋಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ಪತ್ತಾರ ಪರಿಚಯಿಸಿದರು. ಐಶ್ವರ್ಯ ಕೋಲಕಾರ ಸ್ವಾಗತಿಸಿದರು. ಸ್ವಾತಿ ಪಾಟೀಲ ನಿರೂಪಿಸಿದರು. ನಂದಿನಿ ದಂಡಿಗ್ಯಾಗೋಳ ವಂದಿಸಿದರು.