ನಾಯಕತ್ವ ಗುಣ ಬೆಳೆಸಿಕೊಳ್ಳಲಿ

25Anand1
ಬೆಳಗಾವಿಯ ಆರ್‌ಪಿಡಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಡಾ.ಅಭಯ ಪಾಟೀಲ, ಡಾ.ಚಂದ್ರಶೇಖರ ಮುನ್ನೋಳಿ, ಇಂದಿರಾ ಹೋಳಕರ ಇತರರು ಇದ್ದರು.
Published on

ಬೆಳಗಾವಿ: ಜೀವನದಲ್ಲಿ ಬರುವ ಕಷ್ಟ-ಸುಖ, ಪರಸ್ಪರ ಹೊಂದಾಣಿಕೆ, ತಾಳ್ಮೆ, ತ್ಯಾಗ, ಸಹಕಾರ ಇವುಗಳ ಮಹತ್ವ ಅರಿತುಕೊಳ್ಳುವುದರ ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಆರ್‌ಪಿಡಿ ಮಹಾವಿದ್ಯಾಲಯದ ನಿವತ್ತ ಪ್ರಾಧ್ಯಾಪಕ ಡಾ.ಚಂದ್ರಶೇಖರ ಮುನ್ನೋಳಿ ಹೇಳಿದರು.
ನಗರದ ಎಸ್‌ಕೆಇ ಸಂಸ್ಥೆಯ ಆರ್‌ಪಿಡಿ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಅಭಯ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವಾ ಮನೋಭಾವ ಹೊಂದಿರಬೇಕು. ಎನ್‌ಎಸ್‌ಎಸ್ ಸೇರಿಕೊಂಡು ಸಮಾಜ ಸೇವೆಯ ಮೂಲಕ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಮಾನಸಿ ಗಡಕರಿ ಸ್ವಾಗತಿಸಿದರು, ವಿದ್ಯಾ ಧೋಂಗಡಿ ವಂದಿಸಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಇಂದಿರಾ ಹೋಳಕರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net