ಕಠಿಣ ಪರಿಶ್ರಮ ಇದ್ದರೆ ನಿರ್ದಿಷ್ಟ ಗುರಿ ಸಾಧನೆ : ಉದ್ಯಮಿ ಸುಹಾಸ್ ಮರಿಕೆ ಸಲಹೆ

New Project (3)
Published on

ಬೆಳ್ತಂಗಡಿ: ನಿರಂತರವಾಗಿ ಕಠಿಣ ಪರಿಶ್ರಮ ಇದ್ದರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಸುಹಾಸ್ ಮರಿಕೆ ಹೇಳಿದರು.

ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂದ ವತಿಯಿಂದ ‘ಲೀಡರ್ಸ್ ಟಾಕ್’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಮ ಎಂದರೆ ಒಂದು ತಪಸ್ಸು. ನಿರ್ದಿಷ್ಟ ಗುರಿ ಇಟ್ಟುಕೊಂಡು ಛಲದಿಂದ ಸಾಗಿದಾಗ ಅದರಲ್ಲಿ ಯಸ್ಸು ಪಡೆಯಲು ಸಾಧ್ಯ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನ ಬಗ್ಗೆ ಚಿಂತಿಸದೆ ಗೆಲುವಿನಡೆಗೆ ಧುಮುಕಲು ಪ್ರಯತ್ನಿಸಬೇಕು ಎಂದರು.

ಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘ ಸಂಯೋಜಕಕಿ ಪವಿತ್ರಾ ಮತ್ತು ಶ್ರಾವ್ಯಾ ಉಪಸ್ಥಿತರಿದ್ದರು.

ವಾಣಿಜ್ಯ ಸಂಘ ನಾಯಕಿ ಸಿಂಚನಾ ಸಿ.ಎಸ್.ಸ್ವಾಗತಿಸಿದರು. ಶ್ರೀಜಾ ನಿರೂಪಿಸಿದರು. ದೀಪಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net