ಸಾಮಾಜಿಕ ನ್ಯಾಯದ ಸರದಾರರು

CTD 20 Cong
Published on

ಚಿತ್ರದುರ್ಗ: ಮಾಜಿ ಪ್ರಧಾನಿ ರಾಜೀವ್‌ಗಾಂಧಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪಕ್ಷಕ್ಕಷ್ಟೇ ಸೀಮಿತವಲ್ಲ. ಇಡೀ ರಾಷ್ಟ್ರಕ್ಕೆ ಸಾಮಾಜಿಕ ನ್ಯಾಯ ಕೊಟ್ಟಂತ ಮಹಾನ್ ಚೇತನರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜೀವ್‌ಗಾಂಧಿ, ದೇವರಾಜ ಅರಸು ಜಯಂತಿಯಲ್ಲಿ ಇಬ್ಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪ್ರಸ್ತುತ ಯುವಪೀಳಿಗೆ ಈ ಇಬ್ಬರು ನಾಯಕರ ತತ್ವಾದರ್ಶ ಅಳವಡಿಸಿಕೊಂಡು ಮುನ್ನಡೆದರೆ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದರು.

ಜಿಪಂ ಮಾಜಿ ಸದಸ್ಯ ಕೆ.ಅನಂತಮೂರ್ತಿ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣಮೂರ್ತಿ, ಮುಖಂಡರಾದ ಬಿ.ಟಿ.ಜಗದೀಶ್, ಎನ್.ಡಿ.ಕುಮಾರ್, ಮುನಿರಾ ಎ.ಮಕಾಂದಾರ್, ಎಸ್.ಎನ್.ರವಿಕುಮಾರ್, ಸಮೀವುಲ್ಲಾ ಷರೀಫ್, ಮುದಸಿರ್ ನವಾಜ್, ಮಹಡಿ ಶಿವಮೂರ್ತಿ, ಆರ್.ಕೃಷ್ಣಮೂರ್ತಿ, ಚಾಂದ್‌ಪೀರ್, ಪ್ರಕಾಶ್ ರಾಮನಾಯ್ಕ, ಎಚ್.ಅಂಜಿನಪ್ಪ, ಅಬ್ದುಲ್ಲಾ, ಬಿ.ಬಾಲಕೃಷ್ಣಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net