ಭವನದ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ

10-KGL-3,,,
ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಕಚೇರಿ ಆಪ್ತ ಸಹಾಯಕರಿಗೆ ಭೀಮನಗರ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಮನವಿ ಸಲ್ಲಿಸಿದರು. ಆನಂದಮೂರ್ತಿ, ಪಾಪಣ್ಣ, ಕಿರಣ್, ಚಿಕ್ಕಮಾಳಿಗೆ, ರಾಚಪ್ಪಾಜಿ, ದಿಲೀಪ್ ಸಿದ್ದಪ್ಪಾಜಿ, ಲಿಂಗರಾಜು, ಎಸ್.ಸಿದ್ದಪ್ಪಾಜಿ ಇತರರು ಇದ್ದರು.
Published on

ಕೊಳ್ಳೇಗಾಲ: ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಹಾಗೂ ಲೋಕಾರ್ಪಣೆಗೊಳಿಸುವ ಸಂಬಂಧ ಅಡ್ಡಿಪಡಿಸಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುತ್ತಿರುವ ಎಲ್.ನಾಗಣ್ಣ ಅವರ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾಡಳಿತಕ್ಕೆ ಮುಖಂಡರು ಮನವಿ ಸಲ್ಲಿಸಿದರು.

ಚಾಮರಾಜನಗರದ ಜಿಲ್ಲಾಡಳಿತ ಭವನಕ್ಕೆ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು, ಭೀಮನಗರದ ಕಸಬಾ ಯಜಮಾನರು ಮತ್ತು ಮುಖಂಡರು ಭೇಟಿ ನೀಡಿ, ಕಚೇರಿಯ ಆಪ್ತ ಸಹಾಯಕರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ಕಾರ 2003 ಮತ್ತು 2004 ರಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ನಮ್ಮ ಸಮುದಾಯಕ್ಕೆ ಬಾದ್ಯ ಪಟ್ಟಿರುವ ಜಮೀನಿನ ಆಸ್ತಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿ ಪ್ರಾರಂಭಿಸಿದ್ದು ಹಲವು ವರ್ಷಗಳಿಂದ ಕುಂಟುತ್ತಾ ಸಾಗಿ ಮುಕ್ತಾಯ ಹಂತಕ್ಕೆ ತಲುಪಿದೆ. ಲೋಕಾರ್ಪಣೆ ಆಗಬೇಕಾಗಿದ್ದ ಸಮುದಾಯ ಭವನ ಭೀಮನಗರದ ನಿವಾಸಿ ಎಲ್.ನಾಗಣ್ಣ ಹಾಗೂ ಇತರರು ವೈಯಕ್ತಿಕ ಲಾಭಕ್ಕಾಗಿ ಕಾಮಗಾರಿ ನಿರ್ವಹಿಸುವ ಅನುಷ್ಠಾನಾಧಿಕಾರಿಗೆ ವಿನಾಕಾರಣ ಅಡ್ಡಿಪಡಿಸಿದ್ದಲ್ಲದೆ, ಬೆದರಿಕೆ ಒಡ್ಡಿ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳಲು ತೊಂದರೆ ನೀಡುತ್ತಿದ್ದಾರೆ. ಇದರಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿದು ಕಾಲಹರಣವಾಗಿದೆ ಎಂದು ದೂರಿದ್ದಾರೆ.

ಸಮುದಾಯ ಭವನದ ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ವ್ಯಕ್ತಿಗಳಿಗೂ ಕಾಮಗಾರಿಗೂ ಯಾವ ಸಂಬಂಧವೂ ಇಲ್ಲ. ಸರ್ಕಾರದ ಅಧಿಕಾರಿಯಾಗಿರುವ ಕಾಮಗಾರಿ ಅನುಷ್ಠಾನಾಧಿಕಾರಿ (ಕೆಆರ್‌ಐಡಿಎಲ್ ಸಂಸ್ಥೆ) ಸರ್ಕಾರದ ಸೂಚನೆಯಂತೆ ನಡೆದುಕೊಂಡು ಕಾಮಗಾರಿ ನಿರ್ವಹಿಸುವ ಬದಲು, ಈ ವ್ಯಕ್ತಿಗಳಿಗೆ ಹೆದರಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಈಗಲಾದರೂ ಜಿಲ್ಲಾಡಳಿತವು ಎಚ್ಚೆತ್ತುಗೊಂಡು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಎಂ.ಪಾಪಣ್ಣ, ಸಹಕಾರ್ಯದರ್ಶಿ ಶಶಿಧರ್, ಖಂಜಾಚಿ ಕೆ.ರಾಜೇಶ್, ಭೀಮನಗರದ ಯಜ ಮಾನ ಚಿಕ್ಕಮಾಳಿಗೆ, ಮುಖಂಡರಾದ ರಾಚಪ್ಪಾಜಿ, ಲಿಂಗರಾಜು, ದಿಲೀಪ್ ಸಿದ್ದಪ್ಪಾಜಿ, ಎಸ್.ಸಿದ್ದಪ್ಪಾಜಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net