ಕೃಷಿ ಮೂಲಸೌಕರ‍್ಯ ಅಭಿವೃದ್ಧಿಗೆ ಹೆಚ್ಚಿನ ಸಾಲ: ಜಿ.ಪಂ. ಸಿಇಒ

udp-11-lead bank
Published on

ಉಡುಪಿ: ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಕೃಷಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಮೂಲ ಸೌರ‍್ಯಗಳನ್ನು ಅಭಿವೃದ್ದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಿಸಬೇಕು. ಈ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಎಚ್. ತಿಳಿಸಿದರು.

ಮಂಗಳವಾರ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.‌ ಕಳೆದ ಸಾಲಿನಲ್ಲಿ ಕೃಷಿ ಮೂಲಭೂತ ಸೌರ‍್ಯಗಳಿಗೆ ರೂ.೩೧೧.೩೯ ಕೋಟಿ ರೂ. ಗುರಿ ನಿಗದಿ ಮಾಡಲಾಗಿದ್ದು, ಶೇ. ೬.೩೯ರಷ್ಟು ಮಾತ್ರ ಸಾಧನೆಯಾಗಿದೆ. ಗೋಡಾನ್‌ ನರ‍್ಮಾಣಕ್ಕೆ ೨ ಕೋಟಿ ರೂ.ವರೆಗೆ ಸಾಲ ನೀಡುತ್ತಿದ್ದು, ಇದರಲ್ಲಿ ಶೇ.೨೫ರಷ್ಟು ಸಹಾಯಧನ ಲಭ್ಯವಿದೆ. ಜಿಲ್ಲೆಯಲ್ಲಿ ಅಡಿಕೆ ಮತ್ತು ತೆಂಗಿನಕಾಯಿ ಸಂಗ್ರಹಣೆಗೆ ಗೋಡಾನ್‌ ನರ‍್ಮಾಣ ಮಾಡಬಹುದು. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮೀನುಗಾರಿಕಾ ಬೋಟ್ಗಳಿಲ್ಲ!
ಮೀನುಗಾರರಿಗೆ KCC ಮೂಲಕ ಶೂನ್ಯ ಬಡ್ಡಿದರಲ್ಲಿ ೨ ಲಕ್ಷ ವರೆಗೆ ಸಾಲ ನೀಡಲಾಗುತ್ತಿದ್ದು, ಈ ವರ್ಷ ೪೭೧೮ ಅರ್ಜಿ ಸುಮಾರು ೨೨೯೧ ಅರ್ಜಿಗಳು ತಿರಸ್ಕೃತಗೊಂಡಿವೆ. ಬ್ಯಾಂಕ್ನವರು ಸ್ಥಳ ಪರಿಶೀಲನೆ ತೆರಳಿದ ಸಂರ‍್ಭದಲ್ಲಿ ಬೋಟ್ಗಳೇ ಇಲ್ಲ ಎಂಬುದಾಗಿ ಕಾರಣ ನೀಡಿದ್ದಾರೆ. ಹಾಗಾದರೆ ಈ ಬೋಟ್ಗಳಿಗೆ ಡಿಸೇಲ್‌ ಸಬ್ಸಿಡಿ ಹೋಗುತ್ತಿದೆಯೋ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಿಎಂ ಸ್ವನಿಧಿ ಯೋಜನೆಯ ಸಲ ವಿತರಣೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ಬಾಕಿ ಇರುವ ೩೧೯ ಅರ್ಜಿಗಳನ್ನು ತಕ್ಷಣದಲ್ಲೇ ವಿಲೇವಾರಿ ಮಾಡಬೇಕು. ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ಈ ಸ್ಥಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕಿ ಇರುವ ರ‍್ಜಿಗಳನ್ನು ಶೀಘ್ರದಲ್ಲಿ ಇತ್ರ‍್ಥಗೊಳಿಸಬೇಕು ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆ ಉಪನರ‍್ದೇಶಕಿ ಭುವನೇಶ್ವರಿ ಮಾತನಾಡಿ, ಹವಾಮಾನ ಅಧಾರಿತ ಬೆಳೆ ವಿಮೆ ನೋಂದಣಿ ಮಾಡಲು ಜು.೧೫ ಕೊನೆ ದಿನಾಂಕವಾಗಿದ್ದು, ಜು.೩೧ರೊಳಗೆ ರೈತರ ಖಾತೆಯಿಂದ ವಿಮಾ ಮೊತ್ತ ಪಾವತಿಯಾಗಬೇಕು. ಈ ನಿಟ್ಟಿನಲ್ಲ ಬ್ಯಾಂಕ್ಗಳು ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಈವರೆಗೆ ೮೫೬ ಮಂದಿ ನೋಂದಣಿ ಮಾಡಿಕೊಂಡಿದ್ದು, ಎಸ್ ಸಿ ಡಿಸಿಸಿ ಬ್ಯಾಂಕ್‌ ಒಂದರಲ್ಲೇ ೬೧೧ ರೈತರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಮೆನೇಜರ್ ಶೀಬಾ ಸೆಹಜಾನ್ ಮಾತನಾಡಿ, ೨೦೨೩ ಅಂತ್ಯಕ್ಕೆ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಕಳೆದ ಸಾಲಿಗಿಂತ ಶೇ. ೧೧.೦೮ ಬೆಳವಣಿಗೆಯಾಗಿದ್ದು, ೫೨,೫೨೩ ಕೋಟಿ ರೂ ವ್ಯವಹಾರ ನಡೆದಿದೆ. ಸಾಲ ವಿತಣೆಯಲ್ಲಿ ಶೇ. ೧೩.೭೮ ಬೆಳವಣಿಗೆಯಾಗಿದ್ದು ೧೭,೨೬೫ ಕೋಟಿ ಸಾಲ ವಿತರಿಸಲಾಗಿದೆ. ೩೫,೨೫೮ ಕೋಟಿ ರೂ. ಠೇವಣಿ ಸಂಗ್ರಹಿಸಿ ಶೇ. ೯.೮೧ ಸಾಧನೆ ಮಾಡಲಾಗಿದೆ ಎಂದರು.
ಪಿಎಂ ಸ್ವನಿಧಿ ಯೋಜನೆಯಲ್ಲಿ ೩೦೪೯ ಮಂದಿಗೆ ಸಾಲ ವಿತರಣೆಯ ಗುರಿಯಲ್ಲಿ ೪೦೪೬ ಮಂದಿಗೆ ಹಾಗೂ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ ೧೮೦ ಮಂದಿಗೆ ಸಾಲ ವಿತರಣೆಯ ಗುರಿಯಲ್ಲಿ ೪೮೧ ಮಂದಿಗೆ ಸಾಲ ವಿತರಣೆ ಮಾಡಲಾಗಿದೆ. ದರ‍್ಬಲ ವಲಯಕ್ಕೆ ೧೯೨೫.೫೨ ಕೋಟಿ, ೩೪೬೨ ಕೋಟಿ ಮಹಿಳಾ ಫಲಾನುಭವಿಗಳಿಗೆ, ಮುದ್ರಾ ಯೋಜನೆಯಡಿ ೫೨೨ ಕೋಟಿ ರೂ ವಿತರಿಸಲಾಗಿದೆ ಎಂದರು.
RBI ಬ್ಯಾಂಕ್ ಪ್ರತಿನಿಧಿ ಮುರಳಿ ಮೋಹನ್ ಪಾಠಕ್ ಮಾತನಾಡಿ, ಕಳೆದ ೧೦ ವರ್ಷಗಳಿಂದ ಚಾಲ್ತಿಯಲ್ಲಿ ಇಲ್ಲದ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ಹಣವನ್ನು ಆರ್‌ ಬಿ ಐಗೆ ರ‍್ಗಾಯಿಸಬೇಕು. ಇದಕ್ಕೆ ಮುನ್ನ ಸಂಬಂಧಪಟ್ಟ ಖಾತೆದಾರರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ NABARD ಬ್ಯಾಂಕ್ ಡಿಜಿಎಂ ಸಂಗೀತಾ ರ‍್ತಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ. ಪಿಂಜಾರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net