

ಉಡುಪಿ: ಯುವಕರಲ್ಲಿ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಹಾರ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಜಿಲ್ಲಾಮಟ್ಟದ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತೆಂಗಿನಕಾಯಿ, ಗೋಡಂಬಿ ಅಧಾರಿತ ಸ್ಟಾರ್ಟ್ಅಪ್ ಹಾಗೂ ಎಫ್ ಪಿ ಒ ಗಳ ಬಗ್ಗೆಯೂ ಗಮನಹರಿಸಬೇಕು. ಮಲ್ಲಿಗೆಯಿಂದ ಎಣ್ಣೆ ತಯಾರಿಸುವ ಉದ್ಯಮ ಸ್ಥಾಪಿಸಿ ವಿದೇಶಕ್ಕೆ ರಪ್ತು ಮಾಡುವಂತೆ ಹೊಸ ಉದ್ಯಮಿಗಳಿಗೆ ಉತ್ತೇಜನ ನೀಡಬಹುದು. ಮೀನುಗಾರಿಕಾ ಕ್ಷೇತ್ರದಲ್ಲೂ ುಡ್ ಪ್ರೋಸೆಸ್ ಯುನಿಟ್ ಪ್ರಾರಂಭಿಸಬಹುದು. ಈ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಮುದ್ರಾ ಲೋನ್ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬರುತ್ತಿದ್ದು, ಸಾಲಸೌಲಭ್ಯ ಸ್ಥಗಿತವಾಗಿದೆ ಎಂಬುದಾಗಿ ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ತಪು ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ಗೆ ಸೂಚನೆ ನೀಡಿದರು.
ಭಾಷೆ ಕೊರತೆಯಿಂದ ಹಳ್ಳಿಗಳಲ್ಲಿ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸ್ಥಳಿಯ ಭಾಷೆ ಬಾರದ ಅಧಿಕಾರಿಗಳು ದುಭಾಷಿಗಳನ್ನು ನೇಮಿಸಿಕೊಳ್ಳಬೇಕು. ಬ್ಯಾಂಕ್ ಉದ್ಯೋಗಗಕ್ಕೆ ಸ್ಥಳಿಯ ಪ್ರತಿಭೆಗಳು ನೇಮಕಗೊಳ್ಳುವ ನಿಟ್ಟಿನಲ್ಲಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬಹುದು ಎಂದರು.
ಜನರನ್ನು ಅಲೆದಾಡಿಸಬೇಡಿ
ಬ್ಯಾಂಕ್ ಅಧಿಕಾರಿಗಳು ಜನರನ್ನು ಅಲೆದಾಡಿಸಬೇಡಿ. ಸಾಲ ಮಂಜೂರು ಸಾಧ್ಯವಿಲ್ಲದಿದ್ದರೆ ತಕ್ಷಣವೇ ತಿಳಿಸಿಬಿಡಿ. ಬ್ಯಾಂಕ್ ಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಪ್ರಧಾನಿ ಹೇಳುತ್ತಾರೆ ಆದರೆ ನಮಗೆ ಏನೂ ಸಿಗುವುದಿಲ್ಲ ಎಂಬ ಭಾವನೆ ಜನರಿಗೆ ಬರಬಾರದು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯುವುದು ಹೇಗೆ ಮತ್ತು ಯಾವ ದಾಖಲೆಗಳು ಅಗತ್ಯವಿದೆ ಎಂಬುದನ್ನು ಸರಳವಾಗಿ ಪಟ್ಟಿ ಮಾಡಿ ಬ್ಯಾಂಕ್ಗಳಲ್ಲಿ ಪ್ರದರ್ಶಿಸಬೇಕು. ಕೆಲವೇ ದಿನಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಪ್ರಾರಂಭವಾಗಲಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾನುಭವಿಗಳು ಅರ್ಜಿ ಸಲ್ಲಿಸಲಿದ್ದಾರೆ ಎಂದರು.
ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಜಿಪಂ ಸಿಇಒ ಪ್ರಸನ್ನ ಎಚ್., ಆರ್ ಬಿ ಐ ಅಧಿಕಾರಿ ತನು ನಂಜಪ್ಪ, ನಬಾರ್ಡ್ ಡಿಜಿಎಂ ಸಂಗೀತ ಕರ್ತಾ, ಲೀಡ್ ಬ್ಯಾಂಕ್ ಮನೇಜರ್ ಪಿ.ಎಂ.ಪಿಂಜಾರ್, ವಿವಿಧ ಬ್ಯಾಂಕ್ಗಳ ಅಧಿಕಾರಿಗಳಾದ ಮನೋಜ್ ಸಲ್ಯಾನ್, ರಾಜ್ ಗೋಪಾಲ್, ನಿತ್ಯಾನಂದ ಮೊದಲಾದವರು ಉಪಸ್ಥಿತರಿದ್ದರು.