ಕೆನರಾ ಬ್ಯಾಂಕ್‌ನಿಂದ ಸಸಿ ನೆಡುವ ಅಭಿಯಾನ

CTD NEWS CANARA BANK----..
Published on

ಚಿತ್ರದುರ್ಗ: ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಕೆನರಾಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣ ಹಾಗೂ ಬಾಲಭವನ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು.

ಈ ವೇಳೆ ಮಾತನಾಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ. ರಾಘವೇಂದ್ರ, ಜಿಲ್ಲೆಯಲ್ಲಿ 30 ಕೆನರಾ ಬ್ಯಾಂಕ್ ಶಾಖೆಗಳಿವೆ. ಪ್ರತಿ ಶಾಖೆಯಿಂದಲೂ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಸಿ ನೆಡುವುದರ ಜತೆಗೆ ಪೋಷಿಸಲಾಗುವುದು. ದೇಶಾದ್ಯಂತ ಲಕ್ಷಾಂತರ ಗಿಡಗಳನ್ನು ನೆಡುವ ಕಾರ್ಯವಾಗುತ್ತಿದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನಾ ನೆಲವಗಿ, ಶ್ರೀನಿವಾಸ್, ಮೂಕಪ್ಪ, ಎನ್. ಕೋಟೇಶ್, ಸೋಮಶೇಖರ್, ದರ್ಶನ್ ಇತರರು ಇದ್ದರು.

ಸರ್ಕಾರಿ ಕಲಾ ಕಾಲೇಜು: ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಶುಕ್ರವಾರ ಕೆನರಾ ಬ್ಯಾಂಕ್‌ನ 120ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ಪ್ರಾಚಾರ್ಯ ಡಾ.ಜೆ. ಕರಿಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net