

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಕಲಾ ವಿಭಾಗದಲ್ಲಿ ಮಂಜುಳಾ ಗಡದವರ ಶೇ. 88.88 ಪ್ರಥಮ, ಚೆನ್ನಮ್ಮಾ ಪಾಟೀಲ ಶೇ. 84.83 ದ್ವಿತೀಯ, ಕವಿತಾ ಬಾಣಕರ ಶೇ. 76.33 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಸುಚೇತನ್ ಎಸ್.ಎಚ್. ಶೇ. 92 ಅಂಕ ಪಡೆದು ಪ್ರಥಮ, ಅನಿತಾ ಲಾಳಸಂಗಿ ಶೇ. 73.83 ದ್ವಿತೀಯ, ಕಾವೇರಿ ಧರಣಿ ಶೇ. 67.33 ಅಂಕಗಳೊ0ದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.