ಹೊಸ ಲೇಔಟ್‌ಗಳ ನಿರ್ಮಾಣದಲ್ಲಿ ಗೋಲ್‌ಮಾಲ್ ; ಗುಬ್ಬಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

19Gubbi Photo 01
Published on

ಗುಬ್ಬಿ: ಹೊಸಬಡಾವಣೆಗಳ ನಿರ್ಮಾಣದಲ್ಲಿ ಸಾಕಷ್ಟು ಗೋಲ್‌ವಾಲ್... ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗದಲ್ಲಿ ಪಾರ್ಕ್ ನಿರ್ಮಾಣ...ನಗರಾಭಿವೃದ್ಧಿ ನಿಯಮಗಳ ಉಲ್ಲಂಘನೆ...ಅನುದಾನ ಬಳಕೆಗೆ ಯೋಜನೆ ರೂಪಿಸಲು ಒಪ್ಪಿಗೆ ಸೇರಿ ಅನೇಕ ವಿಷಯಗಳು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಜಿ.ಎಸ್.ಬಸವರಾಜು ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಸಾವಾನ್ಯ ಸಭೆಯಲ್ಲಿ ಚರ್ಚಿತವಾದವು.

ಪಟ್ಟಣದ ವ್ಯಾಪ್ತಿಯಲ್ಲಿ ಹೊಸಬಡಾವಣೆಗಳ ನಿರ್ಮಾಣದಲ್ಲಿ ಸಾಕಷ್ಟು ಗೋಲ್‌ವಾಲ್ ನಡೆದಿದೆ. ಸುವಾರು 36 ಸಾವಿರ ಅಡಿಗಳ ಭೂಮಿ ಕಬಳಿಸಿ, 18 ಕೋಟಿ ರೂಪಾಯಿ ಅಧಿಕ ಅವ್ಯವಹಾರ ವಾಡಲಾಗಿದೆ. ಈ ಬಗ್ಗೆ ತನಿಖೆ ವಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಸಿ.ಮೋಹನ್ ಮತ್ತು ಕುವಾರ್ ಆಗ್ರಹಿಸಿದರು.

ಹೇರೂರು ಕೆರೆ ಬಳಿ ಇತ್ತೀಚೆಗೆ ನಿರ್ವಾಣವಾದ ಆರೇಳು ಬಡಾವಣೆಗಳು ನಿಯಮಬಾಹಿರವಾಗಿದೆ. ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗದಲ್ಲಿ ಪಾರ್ಕ್ ನಿರ್ಮಿಸಿ, ಬಡಾವಣೆಯ ಪಾರ್ಕ್ ಜಾಗವನ್ನು ನಿವೇಶನ ವಾಡಿದ್ದಾರೆ ಎಂದರು.

ಕೆಲವು ಬಡಾವಣೆಗಳಲ್ಲಿ ರಸ್ತೆಗಳು ಕಿರಿದಾಗಿವೆ. ಜತೆಗೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಸಿಎ ನಿವೇಶನಗಳನ್ನು ಕಬಳಿಸಲಾಗಿದೆ. ಪಾರ್ಕ್ ನಿರ್ವಾಣದ ಅಳತೆಯನ್ನೇ ಕಿರಿದಾಗಿಸಿರುವುದು ಕಂಡು ಬಂದಿದೆ ಎಂದು ಆರೋಪಿಸಿದ ಸದಸ್ಯ ಸಿ.ಮೋಹನ್, ಇಂತಹ ಬಡಾವಣೆಗಳಿಗೆ ಮಂಜೂರಾತಿ ಹೇಗೆ ಸಿಕ್ಕಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಒಂದೇ ಬಡಾವಣೆಯಲ್ಲಿ 22 ಸಾವಿರ: ಅಡಿಗಳನ್ನು ಕಬಳಿಸಿ ನಗರಾಭಿವೃದ್ಧಿ ನಿಯಮ ಉಲ್ಲಂಸಲಾಗಿದೆ. ಕೆರೆಯ ಸಮೀಪ

ನೀರಿನ ಜೋಪು ಪ್ರದೇಶದಲ್ಲೂ ಬಡಾವಣೆ ನಿರ್ವಾಣಕ್ಕೆ ಅನುಮತಿ ನೀಡಲಾಗುತ್ತಿದ್ದು, ರಸ್ತೆ ಹಾಗೂ ವಿದ್ಯುತ್ ಸಂಪರ್ಕವೂ ಒದಗಿಸಿಲ್ಲ. ಅಧಿಕಾರಿಗಳ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಸದಸ್ಯ ಕುವಾರ್ ಒತ್ತಾಯಿಸಿದರು.

1 ಕೋಟಿ ರೂಪಾಯಿಗೂ ಅಧಿಕ ಅನುದಾನ ಬಳಕೆಗೆ ಯೋಜನೆ ರೂಪಿಸಲು ಒಪ್ಪಿಗೆ ನೀಡಲಾಯಿತು. ಜೆಸಿಬಿ ಯಂತ್ರ, ಟ್ರ್ಯಾಕ್ಟರ್ ಖರೀದಿಗೆ ಸಮ್ಮತಿ ದೊರಕಿತು. ಕಸ ವಿಲೇವಾರಿ ಟಕದ ಅಭಿವೃದ್ಧಿ, ಶುದ್ಧ ನೀರಿನ ಟಕದಲ್ಲಿ ಕ್ಲೋರಿನ್ ಬಳಕೆ, ಅಕ್ರಮ ನೀರಿನ ಸಂಪರ್ಕ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಿ ಬಗ್ಗೆ ಚರ್ಚೆ ನಡೆಸಲಾಯಿತು.

ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಇಂಜಿನಿಯರ್ ಸತ್ಯನಾರಾಯಣ್, ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಇದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಹೊಸ ಬಡಾವಣೆ ನಿರ್ವಾಣಕ್ಕೆ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ನಗರಾಭಿವೃದ್ದಿ ಇಲಾಖೆಯ ನಿಯಮ ಪಾಲಿಸದ ಬಡಾವಣೆಗೆ ಪಪಂ ಅಧಿಕಾರಿಗಳು ಹೇಗೆ ಅನುಮತಿ ನೀಡಿದರು ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಹೇಳಿದ ಶಾಸಕ ಎಸ್.ಆರ್.ಶ್ರೀನಿವಾಸ್, ಈ ಬಗ್ಗೆ ಡಿಸಿ ಜತೆ ಚರ್ಚಿಸಿದ್ದೇನೆ. ತನಿಖೆ ಮುಗಿಯುವವರೆಗೆ ನಿವೇಶನ ವಾರಾಟಕ್ಕೆ ಅನುವು ವಾಡಬಾರದು. ಕೊಂಡುಕೊಂಡ ಗ್ರಾಹಕರಿಗೆ ಮನೆ ನಿರ್ವಾಣಕ್ಕೂ ಆಸ್ಪದ ನೀಡಬಾರದು ಎಂದರು. ಶೀಘ್ರದಲ್ಲೇ ಲೇಔಟ್ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಎಲ್ಲ ಸದಸ್ಯರು ಸಾರ್ವಜನಿಕ ಹಿತಾಸಕ್ತಿಗೆ ಒಗ್ಗೂಡಿ ಕೆಲಸ ವಾಡಬೇಕು. ಸರ್ಕಾರದ ಅನುದಾನಗಳನ್ನು ಸವಾನವಾಗಿ ಹಂಚಿಕೊಂಡು ಅಭಿವೃದ್ಧಿ ಕೆಲಸ ವಾಡಲು ಸದಸ್ಯರಿಗೆ ಕರೆ ನೀಡಿದರು. ಅವ್ಯವಹಾರದ ಬಗ್ಗೆ ಲಿಖಿತ ದೂರು ನೀಡಿದರೆ ಜಿಲ್ಲಾಧಿಕಾರಿಗಳ ಮೂಲಕ ತನಿಖೆ ನಡೆಸಲಾಗುವುದು. ಜಿ.ಎಸ್.ಬಸವರಾಜು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net