

ಲಕ್ಷೆ್ಮೕಶ್ವರ: ಇತ್ತೀಚೆಗೆ ಜರುಗಿದ ಲಕ್ಷೆ್ಮೕಶ್ವರ ಹಾಗೂ ಶಿರಹಟ್ಟಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಗೊಜನೂರ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲೆ ಬಾಲಕರ ವಿಭಾಗ, ಪ್ರೌಢಶಾಲೆ ಬಾಲಕ ಮತ್ತು ಬಾಲಕಿಯರ ವಿಭಾಗದ ಖೋ-ಖೊ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗ ಬಾಲಕರ ವೈಯಕ್ತಿಕ ಆಟಗಳಲ್ಲಿ ಮೃತ್ಯುಂಜಯ ಹುಬ್ಬಳ್ಳಿ 100 ಮೀ. ಓಟ ಪ್ರಥಮ, ಅಭೀಷೇಕ ಲಮಾಣಿ 200 ಮೀ. ಓಟ ದ್ವೀತಿಯ. 4*100 ಮೀಟರ್ ರೀಲೆ ಪ್ರಥಮ. ಪ್ರೌಢಶಾಲೆ ವಿಭಾಗ ಬಾಲಕಿಯರ ವೈಯಕ್ತಿಕ ಆಟಗಳಲ್ಲಿ ಮಧುಮತಿ ಮಾಗಡಿ 200 ಮೀ. ಓಟ ದ್ವಿತೀಯ, ರಾಧಾ ಗಾಂಜಿ 800 ಮೀ. ಓಟ ಪ್ರಥಮ ಮತ್ತು 1,500 ಮೀ. ಓಟ ಪ್ರಥಮ, ಸಹನಾ ಕರಕಣ್ಣವರ 800 ಮೀ. ಓಟ ದ್ವಿತೀಯ ಮತ್ತು 4*100 ಮೀ. ರೀಲೆ ಪ್ರಥಮ.
ಪ್ರಾಥಮಿಕ ಬಾಲಕರ ಮತ್ತು ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಹರೀಶ ಕಳಸೂರ 100 ಮೀ. ಓಟ ಮತ್ತು 200 ಮೀ. ಓಟ ಪ್ರಥಮ, ರವಿ ವಡ್ಡರ 200 ಮೀ ಓಟ ದ್ವಿತೀಯ, ಕೈಫ್ ದಿಂಡವಾಡ ಗುಂಡು ಮತ್ತು ಚಕ್ರ ಎಸೆತದಲ್ಲಿ ಪ್ರಥಮ, ಅನಿತಾ ಭಜಂತ್ರಿ 600 ಮೀ. ಓಟ ದ್ವಿತೀಯ ಮತ್ತು 4*100 ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ.