ಅಸಮರ್ಪಕ ಬಸ್ ಸಂಚಾರ ಖಂಡಿಸಿ ಪ್ರತಿಭಟನೆ

10-LXR- STRIKE MAHILA
Published on

ಲಕ್ಷ್ಮೇಶ್ವರ: ಅಸಮರ್ಪಕ ಬಸ್ ಸೌಲಭ್ಯದಿಂದ ಅಕ್ರೋಶಗೊಂಡ ಮಹಿಳೆಯರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು. ಶ್ರಾವಣ ಮಾಸದ ಕೊನೆಯ ಸೋಮವಾರದ ಹಿನ್ನೆಲೆ ಮಹಿಳೆಯರು ಭಾನುವಾರದಿಂದಲೇ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದರು. ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡ, ವರವಿಮೌನೇಶ್ವರ, ಹರ್ತಿ ಸೇರಿದಂತೆ ಅನೇಕ ಕಡೆ ಸಂಚರಿಸುವ ಬಸ್‌ಗಳು ಭರ್ತಿಯಾಗಿದ್ದವು. ಬೆಳಗ್ಗೆಯಿಂದಲೇ ಬಸ್‌ಗಳು ವೇಳೆಗೆ ಸರಿಯಾಗಿ ಬರದಿರುವುದು ಮತ್ತು ಮೀತಿಮೀರಿದ ಪ್ರಯಾಣಿಕರನ್ನು ತುಂಬಿಕೊಂಡು ಸಾಗುವಂತಾಯಿತು. ಮಧ್ಯಾಹ್ನದಿಂದಲೇ ಬಸ್‌ಗಳು ಸರಿಯಾಗಿ ಬರದಿರುವುದರಿಂದ ಸಂಜೆವರೆಗೂ ಕಾಯುತ್ತ ಕುಳಿತ ಮಹಿಳೆಯರ ಸಹನೆಯ ಕಟ್ಟೆಯೊಡೆದು ಪ್ರತಿಭಟನೆ ನಡೆಸಿದರು. ಹಳ್ಳಿಗಳಿಗೆ ತೆರಳಲು ಬಸ್ ಸೌಲಭ್ಯ ಇಲ್ಲ. 4ರಿಂದ 5 ಗಂಟೆ ಕಾಯಬೇಕಾಗಿದೆ. ನಮಗೆ ವಿಪರೀತ ತೊಂದರೆಯಾಗಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಸಮಾಧಾನಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net