ಚಂದನ ಶಾಲೆಯಲ್ಲಿ ಶರಣ- ಶರಣೆಯರ ವಚನ

10-T ISHWARA
Published on

ಲಕ್ಷ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನ ಆವರಣದಲ್ಲಿ ಸೆ. 14ರಂದು ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೋಸ್ಕರ, ಭಾರತದ ಯುವಕರಿಗಾಗಿ 12ನೇ ಶತಮಾನದ ಶರಣ- ಶರಣೆಯರ ವಚನ ವಿಸ್ತೃತ ವಿಶೇಷ ಕಾರ್ಯಕ್ರಮ ೀರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಹೇಳಿದರು. ಪಟ್ಟಣದಲ್ಲಿ ಭಾನುವಾರ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಸ್ವಸ್ಥ ಸಮಾಜ ನಿರ್ಮಾಣ ಯುವಕರ ಚಿಂತನೆಗಳ ಮೇಲೆ ಅವಲಂಬಿತವಾಗಿದೆ. ಸ್ಕೂಲ್ ಚಂದನ ಮೊದಲಿನಿಂದಲೂ ಇಂತಹ ಚಿಂತನೆಗಳನ್ನು ಯುವಕರಿಗೆ ತಿಳಿಸುತ್ತ ಬಂದಿದೆ. ಈಗ ಮತ್ತೆ ಅಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ. ಬಸವರಾಜ ಪಾಟೀ ಸೇಡಂ ಉದ್ಘಾಟಿಸುವರು. ಮಾಜಿ ಸಚಿವ ಎಸ್.ಎಸ್.ಪಾಟಿಲ, ಯಶಸ್ವಿ ಗ್ರುಪ್ ಎಂಡಿ ಎ.ಎಸ್. ಪಾಟೀ ಪಾಲ್ಗೊಳ್ಳುವರು. ಸಂಸ್ಥಾಪಕ ಟಿ. ಈಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಪ್ರಾಚಾರ್ಯ ರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net