ರೇಬೀಸ್ ರೋಗದ ನಿರ್ಲಕ್ಷ್ಯ ಬೇಡ

28-lxr- rabis
Published on

ಲಕ್ಷೆ್ಮೕಶ್ವರ: ತಾಲೂಕಿನ ಕುಂದ್ರಳ್ಳಿ ಗ್ರಾಮ ಮತ್ತು ತಾಂಡಾದಲ್ಲಿ ಶನಿವಾರ ರೇಬೀಸ್ ರೋಗದ ಬಗ್ಗೆ ಅರಿವು ಮೂಡಿಸುವು, ಚುಚ್ಚುಮದ್ದು ಹಾಕುವ ಕಾರ್ಯಕ್ರಮ ಜರುಗಿತು.

ತಾಲೂಕು ಪಶು ವೈದ್ಯಾಧಿಕಾರಿ ಡಾ. ಎನ್.ಎಚ್. ಓಲೇಕಾರ ಮಾತನಾಡಿ, ಕುಂದ್ರಳ್ಳಿ ಭಾಗದ ಅನೇಕ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಿಂದ ಬರುವ ತೋಳ ಮತ್ತು ನರಿಗಳು ನಾಯಿಗಳಿಗೆ ಕಚ್ಚುವುದರಿಂದ ಅವುಗಳಿಗೆ ಹುಚ್ಚು ರೋಗ ಉಂಟಾಗುತ್ತದೆ. ಅವು ಬೇರೆ ನಾಯಿಗಳಿಗೆ ಕಚ್ಚುವುದರಿಂದ ರೋಗ ಹೆಚ್ಚುತ್ತ ಹೋಗುತ್ತದೆ. ಇವು ಮನುಷ್ಯನಿಗೆ ಕಚ್ಚಿದರೆ ರೇಬೀಸ್ ರೋಗ ಬರುತ್ತದೆ ಎಂದರು.

ಗ್ರಾಮದಲ್ಲಿ ಕೆಲ ದಿನಗಳಿಂದ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಈ ಕುರಿತು ಅರಿವು ಮೂಡಿಸಲು ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹುಚ್ಚು ನಾಯಿ ಕಡಿತಕ್ಕೊಳಗಾದ ವ್ಯಕ್ತಿ ಅಥವಾ ದನಕರುಗಳಿಗೆ 1, 7, 14 ಮತ್ತು 28 ದಿನಗಳಂದು ತಪ್ಪದೇ ರೇಬೀಸ್ ಲಸಿಕೆ ಹಾಕಿಸಬೇಕು. ಪ್ರಾಣಿಗಳಿಗೆ ಲಸಿಕೆಗಳು ಸಮೀಪದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ದೊರೆಯುತ್ತವೆ. ರೋಗದ ಬಗ್ಗೆ ಜನರು ನಿರ್ಲಕ್ಷ್ಯ ವಹಿಸದೇ ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದರು.

ಪಶುವೈದ್ಯಾಧಿಕಾರಿ ಡಾ. ಏಕನಾಥ ಮುಧೋಳಕರ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಹಡಪದ, ಮಂಜುನಾಥ ಕಳಸದ, ರುದ್ರಯ್ಯ ಶೀಲವಂತರಮಠ, ಹಾಲಪ್ಪ ಹಳ್ಳಿಕೇರಿ, ಪರಮೇಶ ಹಂಗನಕಟ್ಟಿ, ಮಂಜುನಾಥ ಗೌರಿ, ಸುರೇಶ ಹಡಪದ, ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ, ಗ್ರಾಪಂ ಸದಸ್ಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net