ಅಂತಾರಾಜ್ಯ ಕಳ್ಳನ ಸೆರೆ, ಮೂರು ಕಾರು ವಶ

22-lxr car
Published on

ಲಕ್ಷ್ಮೇಶ್ವರ: ಅಂತರ ರಾಜ್ಯಗಳಲ್ಲಿ ಕಾರು ಕಳ್ಳತನ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಉಂಬಳಬೈಲ್‌ನ ಸೈಯದ್ ಇರ್ಫಾನ್ ಅಲಿಯಾಸ್ ನಿಹಾಲ್ ಎಂಬಾತನನ್ನು ಲಕ್ಷ್ಮೇಶ್ವರ ಪೊಲೀಸರು ಮಂಗಳವಾರ ಬಂಧಿಸಿ, ಆತನಿಂದ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ರಂಭಾಪುರಿನಗರದಲ್ಲಿ ಕದ್ದ ಕಾರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೋಲೀಸರು ತೆರಳಿದ್ದಾರೆ. ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದ. ಆಗ ಪೊಲೀಸರು ಸಿನೀಮಯ ರೀತಿಯಲ್ಲಿ ಹಿಡಿದರು. ಅಂದಾಜು 15 ಲಕ್ಷ ರೂ. ಮೌಲ್ಯದ ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿಪಿಐ ಎಸ್.ಎಂ. ಶಿರಗುಪ್ಪಿ, ಪಿಎಸ್‌ಐ ಯೋಸೆಫ್ ಜಮೂಲಾ, ಅಪರಾಧ ವಿಭಾಗದ ಪಿಎಸ್‌ಐ ವಿ.ಜಿ. ಪವಾರ, ಎಎಸ್‌ಐ ಎಂ.ಎ. ಮೌಲ್ವಿ, ಟಿ.ಕೆ. ರಾಠೋಡ, ವೈ.ಎಸ್. ಕುಬಿಹಾಳ, ಎಸ್.ಎಸ್. ಮಕಾನದಾರ ಜಿ.ಎಂ. ಬೂದಿಹಾಳ, ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿಎಸ್‌ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net