ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಕ್ಷ್ಮೇಶ್ವರ ಬಂದ್ ಇಂದು

BUNDH
Published on

ಲಕ್ಷ್ಮೇಶ್ವರ: ತಾಲೂಕು ಬರಗಾಲ ಘೋಷಣೆ, ಬೆಳೆಹಾನಿ ಪರಿಹಾರ, ಮಧ್ಯಂತರ ಬೆಳೆವಿಮೆ, ಸಾಲಮನ್ನಾ, ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತಪರ ಸಂಘಟನೆಗಳಿಂದ ಆ.28ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಲಾಗಿದೆ.

ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಪ್ರಾರಂಭಗೊಳ್ಳುವ ಪ್ರತಿಭಟನಾ ರ‌್ಯಾಲಿಗೆ ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು ಚಾಲನೆ ನೀಡುವರು. ದೂದಪೀರಾಂ ದರ್ಗಾ, ಹಾವಳಿ ಆಂಜನೇಯ ದೇವಸ್ಥಾನ, ಮುಖ್ಯ ಬಜಾರ್ ರಸ್ತೆ, ಶಿಗ್ಲಿ ನಾಕಾ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದ ಹತ್ತಿರ ಕೆಲಕಾಲ ರಾಜ್ಯಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತ ಹೋರಾಟಗಾರ ಮಹೇಶ ಹೊಗೆಸೊಪ್ಪಿನ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net