

ಕುಶಾಲನಗರ:
ನವ್ಯ ಕಾಲದಲ್ಲಿ ಕವಿತೆಗಳು ಜಟಿಲವಾಗಿ ಓದುಗರಿಂದ ದೂರ ಆಗುತ್ತಾ ಬಂದಾಗ ಸಾಮಾನ್ಯ ಜನರಲ್ಲಿನ ಕವನÀದ ತುಡಿತ ಹೊರ ಹಾಕಲು ಹನಿಗವನಗಳು ಸುಲಭದ ದಾರಿಯಾದವು ಎಂದು ಖ್ಯಾತ ಕವಿ ಬಿ.ಆರ್. ಲಕ್ಷö್ಮಣ ರಾವ್ ಅಭಿಪ್ರಾಯಪಟ್ಟರು. ಕುಶಾಲನಗರದ ಗುಮ್ಮನಕೊಲ್ಲಿ ಹಾರಂಗಿ ರಸ್ತೆಯಲ್ಲಿರುವ ವರವರದ ಹಾಲ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರ ‘ಹನಿ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಕವಿತೆ ಬೇರೆ ಬೇರೆ ಅರ್ಥಗಳನ್ನು ಧ್ವನಿಸುತ್ತದೆ. ಈ ಲೋಕವನ್ನ ಗ್ರಹಿಸಲು ಸಿಕ್ಕಿದ ಕನ್ನಡಕ ಕನ್ನಡ. ಪ್ರತಿಯೊಬ್ಬರಲ್ಕೂ ಒಬ್ಬ ಕವಿ ಇರ್ತಾರೆ. ಆದರೆ ಎಲ್ಲರಿಗೂ ಕವಿತೆ ಅಭಿವ್ಯಕ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ. ಹನಿಗವಿತೆಗಳು ಜನಸಾಮಾನ್ಯರ ಕವಿತೆ. ಇದು ಮಾಸ್ ಕವಿತೆ. ಸಾವಧಾನದ ದಿನ ಹೋಗಿ ಧಾವಂತದ ದಿನಗಳು ಬಂದಿದೆ. ಕವಿತೆಗಳೂ ಇದೇ ಕಾಲಟ್ಟದಲ್ಲಿದೆ. ದಿಢೀರ್ ಕವಿತೆಗಳಿಂದ ಗುಣಮಟ್ಟ ಕಡಿಮೆ ಆಗುತ್ತದೆ. ಕಾಳಿಗಿಂತ ಜೊಳ್ಳು ಜಾಸ್ತಿ ಆಗುತ್ತದೆ. ಒಳ್ಳೆಯ ಕವಿ ಮಾತ್ರ ಒಳ್ಳೆ ಹನಿಗವಿ ಆಗಬಲ್ಲ. ಹೆಚ್ಚು ಹೆಚ್ಚು ಕವಿತೆಗಳನ್ನು ಓದಬೇಕು. ಇದರಿಂದ ಹನಿಗವನಗಳು ಬರೆಯಲು ಸ್ಪೂರ್ತಿ ಸಿಗುತ್ತದೆ ಎಂದರು.
ಸಾಹಿತಿ ನಾಗೇಶ್ ಕಾಲೂರು ಮಾತಾಡಿ, ಕಾಳಿದಾಸನ ಸಾಹಿತ್ಯದ ಉದಾಹರಣೆಗಳನ್ನು ಕೊಡುತ್ತಾ ಆಕಾಶವಾಣಿಯ ತಮ್ಮ ವೃತ್ತಿಜೀವನದಲ್ಲಿ ಎದುರಾದ ಹಲವು ಹಾಸ್ಯ ಸನ್ನಿವೇಶಗಳನ್ನು ರಸವತ್ತಾಗಿ ವಿವರಿಸಿ ಸಭಿಕರಲ್ಲಿ ನಗೆಯುಕ್ಕಿಸಿದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಚುಟುಕಗಳ ಬಗ್ಗೆ ಮಾತನಾಡುವುದರ ಜತೆಗೆ ಲಕ್ಷö್ಮಣ ರಾವ್ ಅವರ ‘ಜಾಲಿ ಬಾರಿನಲ್ಲಿ ಪೋಲಿ ಗೆಳೆಯರು’ ಹಾಡಿ ರಂಜಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿದರು.
ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಕಮ್ಯುನಿಕೇಷನ್‌ನ ಅನಿಲ್ ಹೆಚ್.ಟಿ. ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಹಾ.ತಿ. ಜಯಪ್ರಕಾಶ್ ಪತ್ನಿ ಜಯಲಕ್ಷ್ಮೀ ವೇದಿಕೆಯಲ್ಲಿದ್ದರು. ಹಾಸನದ ನ್ಯಾಯಾಲಯ ಸಿಬ್ಬಂದಿ ಪಣಿವೇಣಿ ಅವರು ಬಿ.ಆರ್. ಲಕ್ಷ್ಮಣರಾವ್ ಅವರ ಪ್ರಸಿದ್ಧ ಕವಿತೆಗಳಿಗೆ ಧ್ವನಿಯಾಗುವ ಮೂಲಕ ಗಮನ ಸೆಳೆದರು.