

ಮೈಸೂರು: ಸರ್ಕಾರದಲ್ಲಿ ಯಾವುದಾದರೂ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡುತ್ತಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ.ಮಂಜು ಆರೋಪಿಸಿದರು.
ಜೆಡಿಎಸ್-ಬಿಜೆಪಿಗೆ ಮಾನ ಮರ್ಯಾದೆ ಇದೆಯೇ ಎಂದು ಏಕ ವಚನದಲ್ಲಿ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ. ಈ ಚಾಳಿ ನಿಲ್ಲಿಸದಿದ್ದರೆ ಇವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ. ಲಕ್ಷ್ಮಣ್ ಅವರಿಗಿಂತ ಹೆಚ್ಚಿನ ಮೇಧಾವಿಗಳು ರಾಜಕಾರಣದಲ್ಲಿದ್ದಾರೆ. ಆದರೆ, ಇವರ ರೀತಿ ಏಕವಚನದ ಪದ ಪ್ರಯೋಗ ಮಾಡುವುದಿಲ್ಲ. ಅಂತಹವರಿಂದ ಲಕ್ಷ್ಮಣ್‌ಗೆ ಬುದ್ಧಿ ಕಲಿಯಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
ಮಾಜಿ ಮೇಯರ್‌ಗಳಾದ ಎಂ.ಜೆ.ರವಿಕುಮಾರ್, ಲಿಂಗಪ್ಪ ಇದ್ದರು.