ಬಿಜೆಪಿಗೆ ನೈತಿಕತೆ ಇಲ್ಲ

Laxman
Published on

ಮಡಿಕೇರಿ:

ಬೆಲೆ ಏರಿಕೆ ಬಗ್ಗೆ ಮಾತಾಡುವ ಯಾವುದೇ ನೈತಿಕ ಬಿಜೆಪಿಗೆ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಲಕ್ಷö್ಮಣ್ ಹೇಳಿದ್ದಾರೆ. ಅಡುಗೆ ಅನಿಲ, ಹೆದ್ದಾರಿ ಟೋಲ್ ದೆ ಹೆಚ್ಚಿಸುವ ಮೂಲಕ ಜನಸಾಮಾನ್ಯದ ಜೀವನವನ್ನು ಕಷ್ಟಕ್ಕೆ ದೂಡಿರುವುದು ಬಿಜೆಪಿ. ಆದರೆ ಕರ್ನಾಟಕದಲ್ಲಿ ಹಾಲಿನ ಬೆಲೆ ಏರಿಸಿರುವುದು ರೈತರಿಗೆ ಕೊಡುವುದಕ್ಕೋಸ್ಕರ. ಡೀಸೆಲ್ ಮೇಲಿನ ಸುಂಕ ಹೆಚ್ಚಳ ಅಂಥ ಹೊರೆಯೇನೂ ಅಲ್ಲ. ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದ್ದು, ಏರಿಕೆ ವಾಣಿಜ್ಯ ಬಳಕೆದಾರರಿಗೆ ಅನ್ವಯ ಆಗಲಿದೆ. ಹಾಗಾಗಿ ಬೆಲೆ ಏರಿಕೆ ಬಗ್ಗೆ ಬಿಜೆಪಿ ಟೀಕೆ ಅರ್ಥವಿಲ್ಲದು ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿನಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ಬಿಜೆಪಿ ರಾಜಕೀಯ ಮಾಡಲಿ ಆದರೆ ಸಮಾಧಿ ಮೇಲೆ ಬೇಡ. ಬಿಜೆಪಿಯದ್ದು ಭಾವನಾತ್ಮಕ ರಾಜಕೀಯ. ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ಬಿಜೆಪಿ ರಕ್ತದಲ್ಲೇ ಇದೆ. ವಿನಯ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಇನ್ನು ಒಂದು ವಾರ ಕಾಯಿರಿ. ಎಲ್ಲಾ ಸತ್ಯ ಹೊರಗೆ ಬರುತ್ತದೆ. ಬಿಜೆಪಿ ಇಬ್ಬಂದಿತನ ಮನೆ ಮನೆಗೆ ಹೇಳುವ ಕೆಲಸ ಮಾಡಲಾಗುತ್ತದೆ ಎಂದರು.

ವಕ್ಫ್ ಕಾಯಿದೆ ಜಾರಿಗೆ ತರುವ ಮೂಲಕ ಮುಸ್ಲಿಮರನ್ನು 2ನೇ ದರ್ಜೆ ನಾಗರಿಕರನ್ನಾಗಿ ಮಾಡುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ದೇಶವನ್ನು ಒಡೆದು ಆಳುವ ಚಿಂತನೆಯ ಈ ಹುನ್ನಾರದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಜನಾಂದೋಲನ ನಡೆಸಲಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಅವರು ಎಲ್ಲಾ ಪೌರ ಕಾರ್ಮಿಕರನ್ನು ಕಾಯಂ ಮಾಡಲಾಗುತ್ತಿದೆ. ಅವರ ಬದುಕು ಉತ್ತಮ ಪಡಿಸಲಾಗುತ್ತಿದೆ. ಇತರ ಸರ್ಕಾರಿ ನೌಕರರಂತೆ ಕಾಣುವ ವ್ಯವಸ್ಥೆ ಮೇ 1 ರಿಂದ ಜಾರಿಗೆ ಬರಲಿದೆ ಎಂದರು.

ಡಿಸಿಸಿ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ ಕುಮಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ. ಹನೀಫ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಕೋಳುಮಂಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net