

ಕೊಪ್ಪಳ:ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗಗಳಲ್ಲಿ ವಕೀಲರ ಪಾತ್ರ ಅತ್ಯವಶ್ಯ ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದಿಂದ ನಗರದ ಜಿಲ್ಲಾ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ವಕೀಲರಿಗೆ ಲೋಕಾಯುಕ್ತ ಕಾಯ್ದೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯದಾನ ದೇವರ ಕೆಲಸ. ಸ್ವಾತಂತ್ರೃ ಹೋರಾಟದಿಂದಲೂ ವಕೀಲರು ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಶಾಸಕಾಂಗ ಕಾನೂನು, ಶಾಸನ, ನಿಯಮ ರಚಿಸಿದರೆ, ವಕೀಲರು ನಿಯಮ, ಕಾನೂನಿ ಅವಶ್ಯಕತೆ ಹಾಗೂ ಅನಗತ್ಯ ನಿಯಮ ಬಗ್ಗೆ ವಕೀಲರು ಗಮನ ಸೆಳೆಯುತ್ತಾರೆ.
ಲೋಕಾಯುಕ್ತ ಸಂಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಇದಕ್ಕೆ ವಕೀಲರ ಸಹಕಾರ ಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಸಹಕರಿಸುವಂತೆ ತಿಳಿಸಿದರು.
ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ್ ಸಿ. ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಲೋಕಾಯುಕ್ತ ವಿಚಾರಣಗಳ ಹೆಚ್ಚುವರಿ ನಿಂಬಂಧಕ ಸುದೇಶ ರಾಜಾರಾಮ್ ಪರದೇಶಿ, ನಿಂಬಂಧಕ ಎಂ.ವಿ ಚೆನ್ನಕೇಶವ ರೆಡ್ಡಿ, ನ್ಯಾಯಾಧೀಶರಾದ ಕುಮಾರ ಡಿ.ಕೆ., ದೇವೇಂದ್ರ ಪಂಡಿತ್, ಭವಾನಿ ಎಲ್.ಜೆ., ಹರೀಶ ಕುಮಾರ ಎಂ.,
ರಾಜ್ಯ ವಕೀಲರ ಪರಿಷತ್ ಸದಸ್ಯ ಆಸೀಫ್ ಅಲಿ, ಜಿಲ್ಲಾ ಸರ್ಕಾರಿ ವಕೀಲ ರಾಜಶೇಖರ ಗಣವಾರಿ, ಜಿಲ್ಲಾ ಸರ್ಕಾರಿ ಅಭಿಯೋಜಕಿ ಅಪರ್ಣಾ ಬಂಡಿ, ವಕೀಲರ ಸಂಘದ ಪದಾಧಿಕಾರಿಗಳಿದ್ದರು.