

|ಚಿಕ್ಕೋಡಿ: ಆಗ್ರಹಿಸಿ ರಾಜ್ಯ ರೈತಸಂ, ಹಸಿರು ಸೇನೆ ಹಾಗೂ ವಕೀಲರ ನೇತೃತ್ವದ ಪ್ರತಿಭಟನೆ ಸೋಮವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪಟ್ಟಣದ ಬಸವ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು, ಸಂಕೇಶ್ವರ&ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮತ್ತು ನಿಪ್ಪಾಣಿ&ಮುಧೋಳ ರಾಜ್ಯ ಹೆದ್ದಾರಿ ಬಂದ್ ಮಾಡಿ ನೂರಾರು ವಾಹನಗಳ ಸಂಚಾರ ಸ್ಥಗಿತಗೊಳಿಸಿದರು. ಕೆಲವು ಗಂಟೆಗಳ ಕಾಲ ಚಿಕ್ಕೋಡಿ ನಗರ ಸಂಪೂರ್ಣವಾಗಿ ಸ್ತಬ್ಧಗೊಂಡಿತು.
ರೈತರು ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿಪಡಿಸಲು ಸರ್ಕಾರವನ್ನು ಒತ್ತಾಯಿಸಿದರು. ಮಹಾರಾಷ್ಟ್ರ ಮಾದರಿಯಲ್ಲಿ ದರ ನೀಡದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು. ವಕೀಲ ನಾಗೇಶ ಕಿವಡ, ಎನ್.ಬಿ.ಪಾಟೀಲ, ರಾಜು ನಂದಿಕುರಳಿ, ರಮೇಶ ಕಾಳನ್ನವರ, ರಮೇಶ ಹಿತ್ತಲಮನಿ, ಎಂ.ಎಸ್.ಈಟಿ, ಮಂಜುನಾಥ ಪರಗೌಡ, ಭೀಮಾ ಉದಗಟ್ಟಿ, ಆನಂದ ಪಾಶ್ಚಾಪುರೆ, ಸುಧಾಕರ ಪಾಟೀಲ ಮತ್ತು ರೈತ ನಾಯಕರು ಇದ್ದರು. ರೈತರ ಹೋರಾಟದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.