ಭೂ ಸ್ವಾಧಿನ ಹೋರಾಟಕ್ಕೆ ವಕೀಲರ ಸಾಥ್​

Untitled-2
ಮುತ್ತಾನಲ್ಲೂರಲ್ಲಿ ನಡೆಯುತ್ತಿರುವ ಅಹೋರಾತಿ ಧರಣಿಗೆ ಆನೇಕಲ್​ ತಾಲೂಕು ವಕೀಲರ ಸಂದ ಪದಾಧಿಕಾರಿಗಳು ಬೆಂಬಲ ಸೂಚಿಸಿದರು. ತಾಲೂಕು ವಕೀಲರ ಸಂದ ಅಧ್ಯ ಪಟಪಟ್​ ವೈ.ಪ್ರಕಾಶ್​, ತಾಲೂಕು ವಕೀಲರ ಸಂದ ಮಾಜಿ ಅಧ್ಯ ರಮೇಶ್​, ಉಪಾಧ್ಯ ಹರೀಶ್​ಕುಮಾರ್​, ಕಾರ್ಯದರ್ಶಿ ರವೀಶ್​ಕುಮಾರ್​, ಖಜಾಂಚಿ ಶಾರದಾ ಮಣಿ, ಚಿಕ್ಕಹಾಗಡೆ ಪುರುಷೋತ್ತಮ್​ ಇತರರು ಇದ್ದರು.
Published on

ಸರ್ಜಾಪುರ : ಆನೇಕಲ್​ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧಿನ ವಿರೋಧಿಸಿ ಮುತ್ತಾನಲ್ಲೂರು ಗ್ರಾಮದಲ್ಲಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹವು ಬುಧವಾರ 37ದಿನ ಪೂರೈಸಿದ್ದು, ತಾಲೂಕು ವಕೀಲರ ಸಂದ ಪದಾಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಿ ರೈತರಿಗೆ ಬಲ ತುಂಬಿದರು.

37ನೇ ದಿನ ವಿಶೇಷವಾಗಿ ಕೆಐಎಡಿಬಿ ಭೂಸ್ವಾಧಿನ ವಿರೋಧಿಸಿ ಕೊಮ್ಮಸಂದ್ರ ಗ್ರಾಮದಲ್ಲಿರುವ ಬಯಲು ಬಸವೇಶ್ವರ ಸ್ವಾಮಿ ದೇವಾಲಯಕ್ಕೆ ನೂರಾರು ವಕೀಲರು ಆಗಮಿಸಿ ಕೆಐಎಡಿಬಿ ಭೂಸ್ವಾಧಿನ ಪಡಿಸಿಕೊಂಡಿರುವ 12 ಗ್ರಾಮಗಳಿಗೂ ದ್ವಿಚಕ್ರ ವಾಹನಗಳಲ್ಲಿ ಜಾಥಾ ನಡೆಸಿದರು. ಅಲ್ಲದೆ ರೈತರ ಮನೆ ಬಾಗಿಲಿಗೆ ತೆರಳಿ ರೈತರ ಹೋರಾಟಕ್ಕೆ ವಕೀಲರ ಬೆಂಬಲ ಎಂದು ೂಷಣೆಗಳನ್ನು ಕೂಗಿ ನಂತರ ಮುತ್ತನಲ್ಲೂರಲ್ಲಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತೆರಳಿದರು. ವೇದಿಕೆಯಲ್ಲಿ ಮಾತನಾಡಿದ ತಾಲೂಕು ವಕೀಲರ ಸಂದ ಅಧ್ಯ ಪಟಪಟ್​ ವೈ.ಪ್ರಕಾಶ್​, ಅನ್ನ ಕೊಡುವ ರೈತರ ಭೂಮಿಯನ್ನು ಕೆ.ಐ.ಎ.ಡಿ.ಬಿ ಹೆಸರಿನಿಂದ ಸರ್ಕಾರ ವಮಾ ಮಾರ್ಗದಲ್ಲಿ ಕಸಿದುಕೊಂಡು ಅನ್ನ ಕೊಡುವ ರೈತನಿಗೆ ಮಣ್ಣು ಕೊಡುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ ಎಂದರು.

ಕೈಗಾರಿಕೆಗಳಿಂದ ಅನ್ನ ಉತ್ಪಾದಿಸಲು ಸಾಧ್ಯವಿಲ್ಲ, ರೈತರಷ್ಟೇ ಅನ್ನ ನೀಡುತ್ತಾರೆ, ವಕೀಲರ ಕಪ್ಪು ಕೋಟು ರೈತನ ಬೆವರಿನ ರೂಪವಾಗಿದೆ. ಹಾಗಾಗಿ ರೈತರ ಹೋರಾಟಕ್ಕೆ ವಕೀಲರ ಬೆಂಬಲ ಇದ್ದು, ಸರ್ಕಾರ ಕೂಡಲೇ ಅವೈಾನಿಕ ಭೂಸ್ವಾಧಿನ ಕೈ ಬಿಡಬೇಕು ಎಂದು ಒತ್ತಾಯಿಸಿದರು. ವಕೀಲರ ಸಂದ ನಿರ್ದೇಶಕರಾದ ಮೋಹನ್​ಕಾಂತ, ಉದಯ್​ ಕುಮಾರ್​, ನೀಲಮ್ಮ, ಪುರೋಷತ್ತಮ್​, ತಿಮ್ಮರಾಜು, ನಾರಾಯಣಸ್ವಾಮಿ, ಮುರಳಿ ಗೌಡ, ನಿರ್ಮಾಲ, ನಾಗರತ್ನ, ಪ್ರವಿಣ್​, ಗೌರವ ಅಧ್ಯರಾದ ಕೆ.ವಿಶ್ವನಾಥ್​ರೆಡ್ಡಿ, ಪದಾಧಿಕಾರಿಗಳಾದ ರಾಮಸ್ವಾಮಿ ರೆಡ್ಡಿ, ಕೆ.ಸಿ.ದೇವರಾಜ್​ ರೆಡ್ಡಿ, ಉಮಾ ಪರುಶುರಾಮ್​, ಬಸವರಾಜು, ಜಯಪ್ರಕಾಶ್​, ಅಶೋಕ್​, ನಾಗೇಶ್​ ಹಾಜರಿದ್ದರು.

ಸರ್ಕಾರಕ್ಕೆ ಎಚ್ಚರಿಕೆ : ತಾಲೂಕಿನಾದ್ಯಂತ ಕೈಗಾರಿಕೆ, ಕೆಎಚ್​ಬಿ ವಸತಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಸರ್ಕಾರ ಸ್ವಾಧಿನಪಡಿಸಿಕೊಂಡಿದೆ. ಇಲ್ಲಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಿರುವುದರಿಂದ ಇಲ್ಲಿನ ಕೆರೆಗಳು ಕಲಷಿತವಾಗಿದ್ದು, ಪರಿಸರವು ಸಹ ಮಾಲಿನವಾಗಿದೆ. ಈ ಭಾಗದ ಸ್ಥಳಿಯರಿಗೆ ಯಾವುದೇ ಕಾರ್ಖಾನೆಗಳು ಉದ್ಯೋಗಗಳನ್ನು ನೀಡಿಲ್ಲ. ಭೂಸ್ವಾಧಿನ ಕೈ ಬಿಡದಿದ್ದರೆ ಉಗ್ರ ಹೋರಾಟ ಕೈಗೊಳಲಾಗುತ್ತದೆ ಎಂದು ಆನೇಕಲ್​ ತಾಲೂಕು ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಎಚ್ಚರಿಸಿದರು.

ರೈತ ಭೂಮಿ ಕಳೆದುಕೊಂಡರೆ ರಸ್ತೆ, ವಸತಿ, ಕೈಗಾರಿಕೆಗಳು ಅಭಿವೃದ್ಧಿಯಾಗಿ ಉಳ್ಳುವರ ಜೀವನ ಇನ್ನಷ್ಟು ಉನ್ನತಿಯಾಗಲಿದೆ. ಅದರೆ ಈ ಭಾಗದ ಬಡ ಮತ್ತು ಮಾಧ್ಯಮ ವರ್ಗ ಹಾಗೂ ರೈತಾಪಿ ವರ್ಗವು ಅವನತಿಯಾಗುತ್ತದೆ. ಈ ಭೂಸ್ವಾಧಿನದಿಂದ ರೈತನು ಮಣ್ಣಿನೊಂದಿಗಿನ ಸಂಬಂಧ ಕಳೆದುಕೊಳ್ಳುತ್ತಾನೆ. > ಚಿಕ್ಕಹಾಗಡೆ ಪುರುಷೋತ್ತಮ್​ ತಾಲೂಕು ವಕೀಲರ ಸಂದ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net