

ಚಿಕ್ಕಮಗಳೂರು: ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಜಿಲ್ಲಾ ಸತ್ರ ಮತ್ತು ಸಿವಿಲ್ ನ್ಯಾಯಾಧೀಶೆ ಶುಭಗೌಂಡರ್ ಅವರಿಗೆ ಶನಿವಾರ ಚಿಕ್ಕಮಗಳೂರು ವಕೀಲರ ಸಂಘದ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ನಿವೃತ್ತಿ ಅನಿವಾರ್ಯ. ಈ ನಡುವೆ ಕೈಗೊಂಡAಥ ಉತ್ತಮ ಕೆಲಸಗಳೇ ಮುಂದಿನ ಬದುಕಿಗೆ ಆಶಾದೀಪ ಎಂದು ಹೇಳಿದರು.
ನ್ಯಾಯಾಲಯದಲ್ಲಿ ವಕೀಲರು ಹಾಗೂ ಶುಭಗೌಂಡರ್ ಅವರ ನಡುವೆ ಉತ್ತಮ ಬಾಂಧವ್ಯ ಇತ್ತು. ಪ್ರತಿ ಪ್ರಕರಣದಲ್ಲೂ ಶೀಘ್ರಗತಿಯಲ್ಲೇ ಇತ್ಯರ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದರು. ನಿವೃತ್ತಿಯಿಂದ ತೆರಳುತ್ತಿರುವ ಅವರು ಜಿಲ್ಲೆಯಿಂದ ಕಳಂಕರಹಿತ ನಿವೃತ್ತಿಗೊಂಡಿದ್ದಾರೆ ಎಂದರು.
ಈಗಾಗಲೇ ಶುಭಗೌಂಡರ್ ಅವರು ಸುಮಾರು ೧೨ ಊರುಗಳಲ್ಲಿ ಕರ್ತವ್ಯ ನಿರ್ವಹಿಸಿ, ಒಟ್ಟಾರೆ ೩೦ ವರ್ಷಗಳಿಂದ ನ್ಯಾಯಾಂಗ ಕ್ಷೇತ್ರದಲ್ಲಿ ಬದುಕು ಮುಡಿಪಿಟ್ಟಿದ್ದಾರೆ. ಸಿವಿಲ್ ಹಾಗೂ ಸೀನಿಯರ್ ನ್ಯಾಯಾಧೀಶರಾಗಿ ಅಲ್ಲದೇ ಚಿಕ್ಕಮಗಳೂರು ಸತ್ರ ಮತ್ತು ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ಅವರ ಮುಂದಿನ ಜೀವನ ಸಂತೋಷದಿAದ ಕೂಡಿರಲಿ ಎಂದು ಹಾರೈಸಿದರು.
ನಿವೃತ್ತಿ ನಂತರ ನೆಮ್ಮದಿ ಬದುಕಿನ ಜೊತೆಗೆ ಸಾಮಾಜಿಕ ಕಾರ್ಯಚಟುವಟಿಕೆ ನಡೆಸಬೇಕು. ಚಿಕ್ಕಮಗಳೂರಿನಲ್ಲಿ ಕಹಿ ಘಟನೆಗಳು ಸಂಭವಿಸಿದ್ದರೆ ಅವುಗಳನ್ನು ಮರೆತು ಸಿಹಿ ನೆನಪುಗಳನ್ನು ಇಲ್ಲಿಂದ ಕೊಂಡೊಯ್ಯಬೇಕು. ಇದೀಗ ವಕೀಲರ ಬಳಗಕ್ಕೆ ಅತ್ಯಂತ ಸಜ್ಜನ ನ್ಯಾಯಾಧೀಶರ ನಿವೃತ್ತಿಯಿಂದ ಬೇಸರವು ಉಂಟಾಗಿದೆ ಎಂದರು.
ಅಭಿನAದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಸತ್ರ ಮತ್ತು ಸಿವಿಲ್ ನ್ಯಾಯಾಧೀಶೆ ಶುಭಗೌಂಡರ್, ಚಿಕ್ಕಮಗಳೂರು ನ್ಯಾಯಾಲಯದಲ್ಲಿ ವಕೀಲರ ಸಹಕಾರದಿಂದ ಸೇವೆ ಸಲ್ಲಿಸುತ್ತಿರುವುದು ಆತ್ಮತೃಪ್ತಿ ನೀಡಿದೆ. ತಮ್ಮ ಅವಧಿಯಲ್ಲಿ ಲೋಕ ಅದಾಲತ್ ಸೇರಿದಂತೆ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಮುಕ್ತಾಯಗೊಳಿಸಿರುವ ತೃಪ್ತಿ ತಮಗಿದೆ ಎಂದು ಹೇಳಿದರು.
ಜಿಲ್ಲೆಯ ಪ್ರಾಕೃತಿಕ ವಾತಾವರಣ ಅತ್ಯಂತ ಪ್ರಿಯವಾದದು. ವಕೀಲರು, ನ್ಯಾಯವಾದಿಗಳು ಹಾಗೂ ಅಸೋಸಿಯೇಷನ್ ಸಂಪೂರ್ಣ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಗೊಂಡಿz್ದೆÃನೆ. ಸಂಘದ ಅಧ್ಯಕ್ಷರ ಆಶಯದಂತೆ ಸಿಹಿ ಬಾಂಧವ್ಯದ ಮೂಟೆಯನ್ನು ಹೊತ್ತಿಕೊಂಡು ತೆರಳಿ, ಮುಂದಿನ ಜೀವನವನ್ನು ಕುಟುಂಬದ ಜೊತೆ ಸಂತೋಷದಿAದ ಕಳೆಯಲು ಮುಂದಾಗುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲದ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್‌ಕುಮಾರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ಎ.ಪ್ರಿಯದರ್ಶಿನಿ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಪರಮೇಶ್ ಮತ್ತಿತರರಿದ್ದರು.