

ಸೊರಬ: ಕರ್ನಾಟಕ ಬಂದ್‌ಗೆ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ, ಪುರಸಭೆ ಆವರಣದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆಯ ನಡೆಸಿ, ತಹಸೀಲ್ದಾರ್ ಹುಸೇನ್ ಸರಾಕವಸ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ವೈ.ಅಶೋಕ್ ಮಾತನಾಡಿ, ಬರಗಾಲದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಅರುಣ್, ಉಪಾಧ್ಯಕ್ಷೆ ಮಂಜುಳಾ, ಖಜಾಂಚಿ ಗೋಪಾಲ, ವಕೀಲರಾದ ವೈ.ಜಿ.ಪುಟ್ಟಸ್ವಾಮಿ, ಡಿ.ಕೆ.ಪರಶುರಾಮ್, ಕೆ.ಬಿ.ಜಯಶೀಲಗೌಡ, ರುಕ್ಮಾಂಗದರಪ್ಪ, ಮಂಚಪ್ಪ, ಟಿ.ಕೆ.ಪ್ರಶಾಂತ್, ಡಾಕಪ್ಪ, ಓಂಕಾರಪ್ಪ, ಕೆ.ಎಸ್.ಪರಶುರಾಮ್, ರಾಮಪ್ಪ, ರಾಘವೇಂದ್ರ, ಕೃಷ್ಣಮೂರ್ತಿ, ಮಾಲತೇಶ್, ಸತ್ಯನಾರಾಯಣ, ಮಹೇಶ್, ಚಂದ್ರು, ಚಂದ್ರಶೇಖರ್, ವಿನಯ್ ಪಾಟೀಲ್, ಶ್ರೀಧರ್ ಇತರರಿದ್ದರು.