

ಹುಕ್ಕೇರಿ: ಹುಕ್ಕೇರಿಯಲ್ಲಿ ನ್ಯಾಯಾೀಶರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ ಎಂದು ಹಿರಿಯ ದಿವಾಣಿ ನ್ಯಾಯಾೀಶ ಕೆ.ಎಸ್.ರೊಟ್ಟೇರ ತಿಳಿಸಿದರು.
ಪಟ್ಟಣದಲ್ಲಿ ವಕೀಲರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ನ್ಯಾಯಾೀಶರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ನ್ಯಾಯ ನಿರ್ಣಯಗಳ ಸಂದರ್ಭದಲ್ಲಿ ವಕೀಲರು ತೋರಿದ ವಿಶ್ವಾಸ ಮತ್ತು ಪ್ರೀತಿ ಮರೆಯಲಾಗದು. ನ್ಯಾಯಾಲಯದ ಕಾರ್ಯಕಲಾಪಗಳು ಸರಿಯಾಗಿ ನಡೆಯಲು ವಕೀಲರ ಸಂಘದ ಸಹಕಾರ ಅತ್ಯವಶ್ಯಕ ಎಂದರು.
ಕಿರಿಯ ಸಿವಿಲ್ ನ್ಯಾಯಾೀಶ ಗುರುಪ್ರಸಾದ ಸಿ. ಮಾತನಾಡಿ, ಇಲ್ಲಿನ ವಕೀಲರು ತೋರಿದ ಪ್ರೀತಿ, ವಿಶ್ವಾಸಕ್ಕೆ ಸದಾ ಋಣಿ ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ಮಾತನಾಡಿ, ನ್ಯಾಯಾೀಶರ ಕಾರ್ಯ ಕಠಿಣವಾದುದು ಎಂದರು. ಹಿರಿಯ ವಕೀಲರಾದ ಪಿ.ಆರ್.ಚೌಗಲಾ, ರಾಮಚಂದ್ರ ಜೋಶಿ, ಎಸ್.ಜಿ.ನದಾಫ್ ಮಾತನಾಡಿದರು. ವಕೀಲರ ಸಂಘದಿಂದ ನ್ಯಾಯಾೀಶರಾದ ಕೆ.ಎಸ್.ರೊಟ್ಟೇರ, ಗುರುಪ್ರಸಾದ ಸಿ. ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಬಸವರಾಜ ಜಿನರಾಳಿ, ಎಜಿಪಿ ಅನಿಲ ಕರೋಶಿ, ವಕೀಲರಾದ ಬಿ.ಬಿ.ಪಾಸಪ್ಪಗೋಳ, ಬಿ.ಕೆ.ಮಗೆನ್ನವರ, ಬಸವರಾಜ ಹುಂಡೇಕರ, ದಡ್ಡಿಮನಿ, ಆರ್.ಬಿ. ಪಾಟೀಲ,
ಎಸ್.ಆರ್. ಶೆಟ್ಟಿ, ಎಸ್.ಸಿ. ಮಠಪತಿ, ಎಸ್.ಎಸ್. ನಾಗನೂರಿ, ಆರ್.ಬಿ. ಚೌಗಲಾ, ಪ್ರಕಾಶ ಪಾಟೀಲ, ಎಂ.ಎಂ. ಪಾಟೀಲ, ಭೀಮಸೇನ ಬಾಗಿ, ಸಂಘದ ಮಾಜಿ ಅಧ್ಯಕ್ಷ ಅನೀಸ್ ವಂಟಮೂರಿ ಇತರರಿದ್ದರು. ಸಂಘದ ಕಾರ್ಯದರ್ಶಿ ಎಸ್.ಜಿ. ನದ್ಾ ನಿರೂಪಿಸಿದರು. ಮಹಿಳಾ ಪ್ರತಿನಿ ಆಶಾ ಸಿಂಗಾಡಿ ವಂದಿಸಿದರು.