ದಿಗ್ಬಂಧನದಲ್ಲಿದ್ದವರು ಹೊರಬರದಂತೆ ನೋಡಿಕೊಳ್ಳಿ

MEETINIG
Published on

ಯಾದಗಿರಿ: ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ವಲಸೆ ಕಾರ್ಮಿಕರು ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ನಂತರ ಗೃಹ ದಿಗ್ಬಂಧನ ಇರಲಿದ್ದು, ಹೊರಗಡೆ ಬರದಂತೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್​ ಸಮಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕಟ್ಟೆಚ್ಚರ ವಹಿಸುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಖಡಕ್ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸೋಮವಾರ ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಬಿಲ್ ಕಲೆಕ್ಟರ್ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾಯರ್ಾಗಾರದಲ್ಲಿ ಅವರು ಮಾತನಾಡಿದರು.

ವಲಸಿಗರು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇದ್ದಾಗ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಆರೋಗ್ಯದ ಬಗ್ಗೆ ಪ್ರತಿದಿನ ವಿಚಾರಣೆ ಮಾಡಲಾಗುತ್ತಿತ್ತು. ಈಗ ಅವರನ್ನು ಹಂತಹಂತವಾಗಿ ಮನೆಗೆ ಕಳುಹಿಸುತ್ತಿದ್ದರಿಂದ ನಿಗದಿತ ಅವಧಿವರೆಗೆ ಮನೆ ದಿಗ್ಬಂಧನದಲ್ಲಿ ಇರಬೇಕಾಗುತ್ತದೆ ಎಂದರು.

ಈ ಅವಧಿಯಲ್ಲಿ ವಲಸೆ ಕಾಮರ್ಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದು ಸವಾಲಾಗಿದೆ. ಹೀಗಾಗಿ ಹೆಚ್ಚಿನ ಜವಾಬ್ದಾರಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಮತ್ತು ಬಿಲ್ ಕಲೆಕ್ಟರ್ಗಳ ಮೇಲಿದೆ. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ಬಿಲ್ ಕಲೆಕ್ಟರ್ಗಳು ವಾರ್ಡ್​ವಾರು ನಿಗಾ ವಹಿಸಬೇಕು. ಕರೊನಾ ವಿರುದ್ಧ ಹೋರಾಟದ ಜತೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆಯೂ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ನಿಗದಿತ ಅವಧಿವರೆಗೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಕಾರ್ಮಿಕರನ್ನು ಸರ್ಕಾರದ ನಿರ್ದೇಶನದಂತೆ ಮನೆ ದಿಗ್ಬಂಧನಕ್ಕೆ ಕಳುಹಿಸಲಾಗುತ್ತಿದೆ. ಸಂಬಂಧಿತ ಅಧಿಕಾರಿಗಳು ನಿಗಧಿತ ಅವಧಿವರೆಗೆ ನಿರಂತರ ಭೇಟಿ ನೀಡಿ ಅವರ ಛಾಯಾಚಿತ್ರ ಮತ್ತು ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನ್ಯ ಒದಗಿಸಲು ಕ್ರಮ ವಹಿಸಬೇಕು. ಜನಜಾಗೃತಿಗಾಗಿ ಪ್ರತಿ ಗ್ರಾಮದಲ್ಲಿ ಮನೆ ದಿಗ್ಬಂಧನದಲ್ಲಿದ್ದವರ ನಿಗದಿತ ಅವಧಿ ಬಗ್ಗೆ ಡಂಗೂರ ಸಾರಬೇಕು. ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್​ ಸಮಿತಿಗಳನ್ನು ಸಕ್ರಿಯಗೊಳಿಸಲು ಗ್ರಾಮಗಳಲ್ಲಿ ಸಭೆ ನಡೆಸಬೇಕು ಎಂದು ನಿದರ್ೇಶನ ನೀಡಿದರು.

ಹೋಮ್ ಕ್ವಾರಂಟೈನ್ನಲ್ಲಿ ಇರುವವರನ್ನು ಅಕ್ಕಪಕ್ಕದ ಮನೆಯವರು ಸೇರಿ ಯಾರೊಬ್ಬರೂ ಸಂಪರ್ಕ ಮಾಡಬಾರದು. ಹಾಗಂತ ಅವರನ್ನು ತಾರತಮ್ಯ ಮನೋಭಾವದಿಂದ ಕಾಣಬಾರದು. ಸಮುದಾಯದ ಮುಖಂಡರು ಅಗತ್ಯ ಸಹಕಾರ ನೀಡಬೇಕು. ಮನೆ ದಿಗ್ಬಂಧನದಲ್ಲಿ ಇರುವವರ ವರದಿ ಪಾಸಿಟಿವ್ ಬಂದರೂ ಭಯಪಡಬಾರದು. ಅಂತಹವರನ್ನು ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುವುದು ಎಂದು ಅಭಯ ನೀಡಿದರು.

ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇದ್ದವರ ವರದಿ ಬರಲು ತಡವಾಗುತ್ತಿದೆ. ಮೇ 31ರವರೆಗೆ 9,483 ವರದಿ ಬಾಕಿ ಇದೆ. ಈ ಮಧ್ಯೆ ಸಕರ್ಾರದ ನಿದರ್ೇಶನದಂತೆ ನಿಗದಿತ ಅವಧಿ ಪೂರ್ಣಗೊಳಿಸಿದ ಮತ್ತು ಆರೋಗ್ಯದ ಗುಣಲಕ್ಷಣ ಗಮನಿಸಿ ಮನೆ ದಿಗ್ಬಂಧನಕ್ಕಾಗಿ ಕಳಿಸಲಾಗುತ್ತಿದೆ. ಮನೆಗೆ ಕಳುಹಿಸುವಾಗ ಸ್ಟ್ಯಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಿ ವೈದ್ಯಕೀಯ ಪ್ರಮಾಣಪತ್ರ ನೀಡಲಾಗುತ್ತಿದೆ. ವಲಸೆ ಕಾಮರ್ಿಕರ ಮನೆಗೆ ಪೋಸ್ಟರ್ ಕೂಡ ಅಂಟಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಮಿಕರು ಹೊರ ರಾಜ್ಯಗಳಿಂದ ತಮ್ಮ ಎಲ್ಲ ವಸ್ತುಗಳನ್ನು ತೆಗೆದುಕೊಂಡು ತಂಡೋಪತಂಡವಾಗಿ ರೈಲು, ಬಸ್, ಖಾಸಗಿ ವಾಹನಗಳ ಮೂಲಕ ಜಿಲ್ಲೆಗೆ ಬಂದಿದ್ದಾರೆ. ಒಂದೆರಡು ವಾರದಲ್ಲಿ ಸುಮಾರು 15 ಸಾವಿರ ಜನ ಆಗಮಿಸಿದ್ದಾರೆ. ವಲಸಿಗರು ಬಂದಂತೆಯೇ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಜೆ.ಗಾಳಿಯವರ್ ಅವರು ಆಯುವರ್ೇದ, ಯುನಾನಿ ಹಾಗೂ ಹೋಮಿಯೋಪಥಿ ಔಷಧ ಬಗ್ಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಪಂ ಸದಸ್ಯರು, ತಹಸೀಲ್ದಾರರು ಇದ್ದರು. ಅಪರ ಡಿಸಿ ಪ್ರಕಾಶ್ ಜಿ.ರಜಪೂತ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net