ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿ

YADGIRI
Published on

ಯಾದಗಿರಿ: ನಗರ ಪ್ರದೇಶದ ರಸ್ತೆಗಳು ಸುಸಜ್ಜಿತವಾಗಿದ್ದಲ್ಲಿ ಮಾತ್ರ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗಾಂಧಿ ವೃತ್ತದಲ್ಲಿ ಶುಕ್ರವಾರ ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2019-20ನೇ ಸಾಲಿನ ಮ್ಯಾಕ್ರೋ ಯೋಜನೆಯಡಿ ಅಂದಾಜು 21 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಗಾಂಧಿ ವೃತ್ತ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರಸ್ಥಳ. ಇಲ್ಲಿ ಮೊದಲಿನಿಂದಲೂ ಜನಜಂಗುಳಿ ಮತ್ತು ವಾಹನ ದಟ್ಟಣೆ ಹೆಚ್ಚಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿತ್ತು. ಆದರೀಗ ರಸ್ತೆ ಅಭಿವೃದ್ಧಿಯಿಂದ ಜನತೆಗೆ ಅನುಕೂಲವಾಗಲಿದೆ ಎಂದರು.

ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ಜಿಲ್ಲಾದ್ಯಂತ ಕರೊನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು, ಜನತೆ ಹೊರಗಡೆ ಬರಬೇಕಾದರೆ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಸಹ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಪ್ರಮುಖರಾದ ಅಯ್ಯಣ್ಣ ಹುಂಡೇಕಾರ್, ಗುಂಡೇರಾವ ಪಂಚಾಹತ್ರಿ, ನಗರಸಭೆ ಸದಸ್ಯರಾದ ವಿಲಾಸ ಪಾಟೀಲ್, ಮಶಪ್ಪ, ಸುರೇಶ ಅಂಬಿಗೇರ, ಲಲಿತಾ ಅನಪುರ, ಅಂಬಯ್ಯ ಶಾಬಾದಿ, ಮಾರುತಿ ಕಲಾಲ್, ಸೂಗಪ್ಪ ಬೆಳಗೇರಿ, ಅಧಿಕಾರಿಗಳಾದ ಸಿ.ಎಂ. ಪಾಟೀಲ್, ವಿಶ್ವನಾಥರೆಡ್ಡಿ ನಾಯ್ಕಲ್, ಬಕ್ಕಪ್ಪ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net