ಅಪಘಾತದಲ್ಲಿ ವಕೀಲ ಸಾವು: ಹೊಡಾಘಟ್ಟ ಸಮೀಪ ಸಂಭವಿಸಿದ ಅಪಘಾತ

crime
Published on

ಮಂಡ್ಯ: ತಾಲೂಕಿನ ಹೊಡಾಘಟ್ಟ ಗ್ರಾಮದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಕೀಲ ಮೃತಪಟ್ಟಿದ್ದಾರೆ.
ಮಂಡ್ಯ ನಗರದ ಕಾವೇರಿನಗರದಲ್ಲಿ ವಾಸವಿದ್ದ, ಮೂಲತಃ ಮದ್ದೂರು ತಾಲೂಕು ತೊರೆಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಟಿ.ಕೆ.ನವೀನ್‌ಕುಮಾರ್(40) ಮೃತ ವಕೀಲ. ಮಂಡ್ಯ ಮತ್ತು ರಾಮನಗರದಲ್ಲಿ ವಕೀಲಿಕೆ ವೃತ್ತಿ ಮಾಡುತ್ತಿದ್ದ ಅವರು, ಮದ್ದೂರು ತಾಲೂಕು ಮರ‌್ನವಮಿದೊಡ್ಡಿ ಗ್ರಾಮದಲ್ಲಿನ ಸ್ನೇಹಿತರೊಬ್ಬರ ತಾಯಿಯ ತಿಥಿ ಕಾರ್ಯದಲ್ಲಿ ಭಾಗಿಯಾಗಿ ಮಂಡ್ಯಗೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ.
ಬೆಸಗರಹಳ್ಳಿ ಮಾರ್ಗವಾಗಿ ಮೊಪೆಡ್‌ನಲ್ಲಿ ಮಂಡ್ಯಕ್ಕೆ ಬರುತ್ತಿದ್ದಾಗ ಹೊಡಾಘಟ್ಟ ಗ್ರಾಮದ ಬಳಿ ಎದುರಿನಿಂದ ಬಂದ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ನವೀನ್‌ಕುಮಾರ್ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಸೌಮ್ಯಾ, ಪುತ್ರಿ ಇದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net