

ಚನ್ನರಾಯಪಟ್ಟಣ: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ಭೇಟಿ ನೀಡಿ, ಭಾನುವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಹಸು ಹಾಗೂ ಕರುವನ್ನು ವೀಕ್ಷಿಸಿದರು.
ಬಳಿಕ ಮಾತನಾಡಿ, ಆಕಸ್ಮಿಕ ಬೆಂಕಿಯಲ್ಲಿ ಸಿಲುಕಿ ತೀವ್ರ ಗಾಯಗೊಂಡಿರುವ ಹಸು ಮತ್ತು ಕರುವಿನ ಆರೈಕೆ ಹಾಗೂ ಕೊಟ್ಟಿಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಕ್ತ ಸವಲತ್ತು ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹಸುವಿನ ಮಾಲೀಕ ದೇವರಾಜೇಗೌಡ ಅವರಿಗೆ ಭರವಸೆ ನೀಡಿದರು.