ಸರ್ಕಾರಿ ಸೌಲಭ್ಯ ಸದುದ್ದೇಶಕ್ಕೆ ಬಳಸಿ

web 1
Published on

ಕಡೂರು: ಪದವಿ ವಿದ್ಯಾರ್ಥಿಗಳಿಗೆ ಸೂಕ್ತ ಸಂದರ್ಭದಲ್ಲಿ ಲ್ಯಾಪ್​ಟ್ಯಾಪ್ ನೀಡಲಾಗುತ್ತಿದ್ದು, ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್ ಸಲಹೆ ನೀಡಿದರು.

ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ 2019-20ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟ್ಯಾಪ್ ವಿತರಿಸಿ ಮಾತನಾಡಿದರು.

ಹಲವು ದಿನಗಳಿಂದ ಪದವಿ ವಿದ್ಯಾರ್ಥಿಗಳ ಪಾಲಕರು ಲ್ಯಾಪ್​ಟ್ಯಾಪ್ ವಿತರಣೆ ಬಗ್ಗೆ ಕೇಳುತ್ತಿದ್ದರು. ಈಗ ಸೌಲಭ್ಯ ದೊರಕುತ್ತಿದೆ. ಮಕ್ಕಳು ಕಂಪ್ಯೂಟರ್ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂಬುದು ಸರ್ಕಾರದ ಮೂಲ ಉದ್ದೇಶ. ಕಾಲೇಜಿನಲ್ಲಿ 1800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲ ವಿಷಯಗಳಲ್ಲೂ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ ಎಂದರು.

ಕಾಲೇಜು ಹಿಂಭಾಗದಲ್ಲಿ ಕ್ರೀಡಾ ಇಲಾಖೆಯಿಂದ ನಿವೇಶವನ್ನು ಕಾಲೇಜಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇದೇ ನಿವೇಶನದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ವಿುಸಲಾಗುವುದು. ವಿದ್ಯಾರ್ಥಿಗಳು ರಾಜಕಾರಣಿಗಳನ್ನು ಬೇರೆ ದೃಷ್ಟಿಯಲ್ಲಿ ನೋಡದೆ ತಾವು ಸಹ ರಾಜಕಾರಣದಲ್ಲಿ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net