

ಶಿಗ್ಗಾಂವಿ: ಪರವಾನಗಿ ಇಲ್ಲದೆ ಇಲ್ಲಿಯ ಸಂತೆ ಮೈದಾನದಲ್ಲಿ ಡಿಜೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ 12 ಜನರ ವಿರುದ್ಧ ಇಲ್ಲಿಯ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಡಗಿ ಪಟ್ಟಣದ ರಬ್ಬಾನಿ ಟೋಕಲ್ಲಿ, ರಬ್ಬಾನಿ ಸೊಲ್ಲಾಪುರ, ಆಸೀಪ್ ದೊಡ್ಡಮನಿ, ಜಾಫರಸಾಬ ಬಮ್ಮಿಗಟ್ಟಿ, ನಿಸ್ಸಾರಅಹ್ಮದ್ ಸೇರಿ 12 ಜನರ ವಿರುದ್ಧ ದೂರು ದಾಖಲಾಗಿರುವುದು.
ಇವರು ಸಂತೆ ಮೈದಾನದಲ್ಲಿ ಸೆ. 17ರಂದು ಯಾವುದೆ ಪರವಾನಗಿ ಪಡೆಯದೆ ಡಿಜೆ ಹಚ್ಚಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.