ಕಾನೂನು ಪಾಲನೆ ಎಲ್ಲರ ಕರ್ತವ್ಯ: ಸಚಿವೆ ಲಕ್ಷ್ಮಿಹೆಬ್ಬಾಳ್ಕರ್

29 Jaggu 11
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಚಿವೆ ಲಕ್ಷ್ಮಿಹೆಬ್ಬಾಳ್ಕರ್​ ಉದ್ಘಾಟಿಸಿದರು. ತ್ಯಾಗರಾಜ ಇನ್ವಾ$್ಯಲಿ, ಅಶ್ವಿನಿ ಸಿರಿಯನ್ನವರ, ಕೆ.ಕಾತ್ಯಾಯಣಿ, ಸಿ.ಎಂ. ಪುಷ್ಪಲತಾ, ಎಸ್​.ಎಸ್​.ಕಿವಡಸಣ್ಣವರ, ಬಸವರಾಜ ಮುಗಳಿ ಇತರರಿದ್ದರು.
Published on

ಬೆಳಗಾವಿ: ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಾನೂನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದರು. ಬೆಳಗಾವಿ ಬಾರ್​ ಅಸೋಸಿಯೇಷನ್​ನಿಂದ ಕೋರ್ಟ್​ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಸಂವಿಧಾನಕ್ಕೆ ಬಹಳಷ್ಟು ಗೌರವ ಹಾಗೂ ಶಕ್ತಿಯಿದೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ಸರ್ಕಾರದಲ್ಲಿ ಏಕೈಕ ಮಹಿಳಾ ಸಚಿವೆಯಾಗಿರುವೆ. ಅದಕ್ಕೆ ಕಾರಣ ಸಂವಿಧಾನ. ಇದು ನಮ್ಮ ಸಂವಿಧಾನದ ಶಕ್ತಿ ಎಂದರು.

ಮಹಿಳೆಯರು, ಪುರುಷರಿಗೆ ಸಮಾನ ಹಕ್ಕು ಅಂತ ಅಂಬೇಡ್ಕರ್​ ಹೇಳಿದ್ದರು. ವಕೀಲರ ಸಂಗಳಲ್ಲೂ ಶೇ.33 ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು ಅಂತ ಕೋರ್ಟ್​ ಆದೇಶಿಸಿದೆ. ಮಹಿಳೆ ಇಲ್ಲದ ಮನೆ ಇರುವುದಕ್ಕೆ ಸಾಧ್ಯವೇ ಇಲ್ಲ. ಮಹಿಳೆ ಶ್ರಮಪಟ್ಟು ಪ್ರತಿ ೇತ್ರದಲ್ಲಿ ಪುರುಷರ ಸಮಾನವಾಗಿ ಬೆಳೆದಿದ್ದಾಳೆ ಎಂದರು.

ನ್ಯಾಯಾಧೀಶರಾದ ತ್ಯಾಗರಾಜ ಇನ್ವಾ$್ಯಲಿ, ಅಶ್ವಿನಿ ಸಿರಿಯನ್ನವರ, ಕೆ.ಕಾತ್ಯಾಯಣಿ, ಸಿ.ಎಂ. ಪುಷ್ಪಲತಾ, ಬಾರ್​ ಅಸೋಸಿಯೇಷನ್​ ಅಧ್ಯ ಎಸ್​.ಎಸ್​.ಕಿವಡಸಣ್ಣವರ, ಉಪಾಧ್ಯ ಬಸವರಾಜ ಮುಗಳಿ, ಕಾರ್ಯದರ್ಶಿ ಯಲ್ಲಪ್ಪ ದಿವಟೆ, ಅಶ್ವಿನಿ ಹವಾಲ್ದಾರ್​ ಸೇರಿ ಇತರ ವಕೀಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net