

ಹಳ್ಳೂರ: ಪ್ರತಿಯೊಬ್ಬ ನಾಗರಿಕ ಸಂವಿಧಾನ, ಕಾನೂನು ಉಚಿತವಾಗಿ ತಿಳಿದುಕೊಳ್ಳಲು ಕಾನೂನು ಅರಿವು ನೆರವು ಕಾಯಕ್ರಮ ಪೂರಕ ಎಂದು ಮೂಡಲಗಿ ನ್ಯಾಯಾಲಯದ ನ್ಯಾಯಾೀಶೆ ಜ್ಯೋತಿ ಪಾಟೀಲ ಹೇಳಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಮೂಡಲಗಿ-ಗೋಕಾಕ ತಾಲೂಕು ಕಾನೂನು ಸೇವೆಗಳ ಸಮಿತಿ, ಮೂಡಲಗಿ ವಕೀಲರ ಸಂಘ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ನಾಗರಿಕ ಸಬಲೀಕರಣ ಅಭಿಯಾನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜತೆಗೆ ಕಾನೂನಿನ ತಿಳಿವಳಿಕೆ ಅವಶ್ಯ ಎಂದರು.
ವಕೀಲ ಎಲ್.ವೈ. ಅಡಿಹುಡಿ ಮಾತನಾಡಿ, ದೇಶದ ಪ್ರಜೆಗಳಾಗಿ ಕಾನೂನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಗ್ರಾಪಂ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ವಕೀಲರ ಸಂಘದ ಉಪಾಧ್ಯಕ್ಷ ಎಲ್.ಬಿ.ವಡ್ಡೇರ, ಶಿರಸ್ತೆದಾರ ಎಂ.ಆರ್. ಗೋಣಿ, ವಕೀಲರಾದ ಡಿ.ಎಸ್.ರೋಡ್ಡನ್ನವರ, ಪಿ.ಎಂ. ಮಾವರಕರ, ಎಸ್.ಬಿ. ತುಪ್ಪದ, ವೈ.ಎಸ್. ಖಾನಟ್ಟಿ, ಸಿಆರ್‌ಪಿ ಆರ್.ಎನ್. ಪಾನಾರೆ, ಶಾಲಾ ಮುಖ್ಯಶಿಕ್ಷಕ ಎಸ್.ಎಚ್. ವಾಸನ, ಶಿಕ್ಷಕಿ ಆರ್.ಜಿ.ಕುರನಿಂಗ ಇತರರಿದ್ದರು.