

ಹುಬ್ಬಳ್ಳಿ : ನಿತ್ಯದ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಕಾನೂನಿನ ಜ್ಞಾನ ಅಗತ್ಯ. ಪ್ರತಿಯೊಬ್ಬರೂ ಕಾನೂನು ಪಾಲಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ನಗರದ 3ನೇ ಜೆ.ಎಂ.ಎಫ್.ಸಿ. ಕೋರ್ಟ್ ನ್ಯಾಯಾಧೀಶೆ ಅನಿತಾ ಸಾಲಿ ಹೇಳಿದರು.
ಇಲ್ಲಿನ ಟಿಪು್ಪ ಷಹೀದ ಪಾಲಿಟೆಕ್ನ್ನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷ್ನರೇಟ್ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಅಪರಾಧ, ಮಾದಕ ವಸ್ತು ಸೇವನೆ ಹಾಗೂ ಕಾನೂನು ಜಾಗೃತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಲವಾರು ದುಶ್ಚಟಗಳಿಗೆ ಮಾರು ಹೋಗುತ್ತಿದ್ದು, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತು ಮನುಷ್ಯನನ್ನು ಕತ್ತಲೆಯ ಕೂಪಕ್ಕೆ ತಳ್ಳಿ, ಸಂಪೂರ್ಣ ನಾಶ ಮಾಡುತ್ತದೆ. ಆದ್ದರಿಂದ ಸುಭದ್ರ ಹಾಗೂ ಆರೋಗ್ಯವಂತ ಸಾಮಾಜ ನಿರ್ವಣಕ್ಕಾಗಿ ವ್ಯಸನ ಮುಕ್ತ ವಾತಾವರಣ ನಿರ್ವಿುಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಿದೆ ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಇನಸ್ಪೆಕ್ಟರ್ ಸುರೇಶ ಯಳ್ಳೂರ ಮಾತನಾಡಿ, ಪ್ರತಿಯೊಬ್ಬರಲ್ಲಿ ಕಾನೂನು ಅರಿವು ಮೂಡಿದಾಗ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಮೂಲಕ ಸ್ವಾಸ್ಥ ಸಮಾಜ ನಿರ್ವಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರವೀಂದ್ರ ಸಿಂಗ್ ಅತ್ತೆರ ಮಾತನಾಡಿ, ಮಾದಕ ವಸ್ತು ಸೇವನೆ ಸ್ಲೋ ಪಾಯಿಜನ್ ಇದ್ದಂತೆ. ಇದು ವ್ಯಕ್ತಿಯನ್ನು ನಿಧಾನವಾಗಿ ನುಂಗುತ್ತದೆ ಮತ್ತು ಅವನ ಜೀವನವನ್ನೇ ಹಾಳು ಮಾಡುತ್ತದೆ. ಇದನ್ನು ವಿದ್ಯಾರ್ಥಿಗಳು ಅರಿತುಕೊಂಡು ಬೇರೆಯವರಿಗೂ ಜಾಗೃತಿ ಮೂಡಿಸಿ, ವ್ಯಸನ ಮುಕ್ತ ಸಮಾಜ ನಿರ್ವಿುಸಬೇಕು ಎಂದು ತಿಳಿಸಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ರುದ್ರಪ್ಪ ಗುಡದರಿ, ಶಿವಾನಂದ ಬನ್ನಿಕೊಪ್ಪ, ಎಚ್ಆರ್ಡಿ ಚೇರ್ಮನ್ ಬಸವರಾಜ ಕಬ್ಬೇರ, ವಿಭಾಗ ಮುಖ್ಯಸ್ಥರಾದ ಚಂದ್ರಶೇಖರ ತುಪ್ಪದ, ಎಂ.ಎಸ್. ಸೋಮನಕಟ್ಟಿ, ಬಾಳೇಶ ಹೆಗ್ಗಣ್ಣವರ ಹಾಗೂ ಇತರರು ಇದ್ದರು. ಎಂ.ಎ. ಬಾಗಲಕೋಟ ಸ್ವಾಗತಿಸಿದರು. ಕಿರಣಕುಮಾರ ಮಂಟೂರ ನಿರೂಪಿಸಿದರು.