ಲಾ ಗೈಡ್ ಕನ್ನಡ ಕಾನೂನು ಮಾಸಿಕದ ಕ್ಯಾಲೆಂಡರ್, ಡೈರಿ ಬಿಡುಗಡೆ

10
Published on

ಮೈಸೂರು: ಲಾ ಗೈಡ್ ಕನ್ನಡ ಕಾನೂನು ಮಾಸಿಕದ ವತಿಯಿಂದ ಶನಿವಾರ ನೂತನ ವರ್ಷದ ಕ್ಯಾಲೆಂಡರ್, ಡೈರಿ ಬಿಡುಗಡೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಏರ್ಪಡಿಸಲಾಗಿತ್ತು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಜಿ. ಹುನುಗುಂದ ಬಿಡುಗಡೆ ಮಾಡಿದರು. ವೆಬ್ ಆವೃತ್ತಿಯನ್ನು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ.ವೆಂಕಟೇಶ್ ಮೂರ್ತಿ ಅನಾವರಣ ಮಾಡಿದರು.

ಶಾಸಕರಾದ ಜಿ.ಟಿ. ದೇವೇಗೌಡ, ಮರಿತಿಬ್ಬೇಗೌಡ ಮುಖ್ಯ ಅತಿಥಿಗಳಾಗಿದ್ದರು. ನಿವೃತ್ತ ಐಜಿಪಿ ಡಿ.ಎನ್. ಮುನಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ಕಾರ್ಯದರ್ಶಿ ಎಸ್. ಉಮೇಶ್ ಇದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ.ಶೆಲಜಾ ಧರ್ಮೇಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವಕೀಲರಾದ ಎಚ್.ವಿ. ಶ್ರೀನಾಥ್, ಸಿ. ಬಸವರಾಜು, ಮನೋಹರ್, ಶಿವಣ್ಣೇಗೌಡ, ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಕೆ.ಬಿ. ಗಣಪತಿ ಮಾತನಾಡಿ, ವಕೀಲರಿಗೆ ಕ್ಯಾಲೆಂಡರ್ ಮತ್ತು ಡೈರಿ ಬಹುಮುಖ್ಯ ಎಂದರು. ಡಿ.ಎನ್. ಮುನಿಕೃಷ್ಣ ಅವರು ಮೈಸೂರಿನಲ್ಲಿ ಎಸ್ಪಿಯಾಗಿದ್ದಾಗ ಕೋಮುಗಲಭೆ ನಿಯಂತ್ರಿಸಿದರು ಹಾಗೂ ನಿಂತು ಹೋಗಿದ್ದ ಕುಸ್ತಿ ಪಂದ್ಯಾವಳಿಯನ್ನು ಪುನಾರಂಭಿಸಿದರು ಎಂದು ಸ್ಮರಿಸಿದರು.

ಡಿ.ಎನ್. ಮುನಿಕೃಷ್ಣ ಮಾತನಾಡಿ, ಪ್ರಸ್ತುತ ಸಾರ್ವಜನಿಕ ಜೀವನದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ವಂಚನೆ, ದ್ರೋಹ, ಮೋಸ ಹೆಚ್ಚುತ್ತಿವೆ ಎಂದು ವಿಷಾದಿಸಿದರು.ಎಂ.ಡಿ. ಹರೀಶ್ ಕುಮಾರ್ ಹೆಗ್ಡೆ, ಎಚ್.ಎನ್. ವೆಂಕಟೇಶ್, ಡಿವೈಎಸ್ಪಿ ಯಶವಂತ್ ಕುಮಾರ್, ಧರ್ಮೇಂದ್ರ, ಇನ್ಸ್‌ಪೆಕ್ಟರ್ ರವಿಶಂಕರ್, ಉಪನ್ಯಾಸಕ ಎಚ್.ಎನ್. ಗಿರೀಶ್, ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ವಕೀಲ ಬಿ.ಪಿ.ರಾಜೇಶ್, ಎಸ್. ಲೋಕೇಶ್, ಆರ್. ಗಿರಿಜೇಶ್, ಜಿ.ವಿ. ರಾಮಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net