ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ : ಸಿಪಿಐ ಐ. ಎಂ. ಮಠಪತಿ ಸಲಹೆ

RBK-29-2
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಶಾಂತಿ ಪಾಲನೆ ಸಭೆಯಲ್ಲಿ ಸಿಪಿಐ ಐ.ಎಂ. ಮಠಪತಿ ಮಾತನಾಡಿದರು. ಪೌರಾಯುಕ್ತ ಅಶೋಕ ಗುಡಿಮನಿ, ನಗರಸಭೆ ಅಧ್ಯಕ್ಷ ಸಂಜು ತೆಗ್ಗಿ ಇದ್ದರು.
Published on

ರಬಕವಿ/ಬನಹಟ್ಟಿ: ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಶ್ರೇಷ್ಠ. ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಗಣೇಶ ಹಬ್ಬ ಆಚರಿಸಬೇಕು ಎಂದು ಬನಹಟ್ಟಿ ಸಿಪಿಐ ಐ.ಎಂ. ಮಠಪತಿ ಹೇಳಿದರು.

ಬನಹಟ್ಟಿ ಪೊಲೀಸ್ ಠಾಣೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣೇಶೋತ್ಸವ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯನ್ನು ಹಳೆಯ ಮಾರ್ಗದಲ್ಲಿಯೇ ಕೈಗೊಳ್ಳಬೇಕು. ಹೊಸ ಮಾರ್ಗಕ್ಕೆ ಅನುಮತಿ ನೀಡುವುದಿಲ್ಲ. ಗಣೇಶ ಮಂಡಳಿಯವರು ಸರ್ಕಾರದ ಮಾರ್ಗಸೂಚಿಗಳಂತೆ ಹಬ್ಬ ಆಚರಣೆ ಮಾಡಬೇಕು ಎಂದರು.

ಪೌರಾಯುಕ್ತ ಅಶೋಕ ಗುಡಿಮನಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ಕೊಡುಗೆಯಾಗಿ ನೀಡಬೇಕು ಎಂದರು.

ಬನಹಟ್ಟಿ ಪಿಎಸ್‌ಐ ರಾಖೇಶ ಬಗಲಿ ಮಾತನಾಡಿ, ಪ್ರತಿವರ್ಷ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಪ್ರತಿಯೊಂದು ಮಂಡಳಿಯವರು 10 ಸ್ವಯಂ ಸೇವಕರನ್ನು ನೇಮಿಸಿ ಠಾಣೆಗೆ ಮಾಹಿತಿ ನೀಡಬೇಕು. ಸರ್ಕಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಪಿಎಸ್‌ಐ ರವಿ ಪವಾರ, ಪಿ.ಬಿ. ಪೂಜಾರಿ, ಪೊಬೆಷನರಿ ಪಿಎಸ್‌ಐ ಬಿ.ಎಸ್. ನಾಯಕ, ಶಿವಾನಂದ ಗಾಯಕವಾಡ, ಡಾ. ಅಕ್ಬರ್ ತಾಂಬೋಳಿ, ಶ್ರೀಶೈಲ ಧಬಾಡಿ, ಭೀಮಸಿ ಮಗದುಮ, ರಾಜಶೇಖರ ಮಾಲಾಪುರ, ಬಸಪ್ರಭು ಹಟ್ಟಿ, ಪ್ರಕಾಶ ಸಿಂಘನ, ಶ್ರೀಶೈಲ ಆಲಗೂರ, ಅಕ್ಬರ ತಾಂಬೋಳಿ, ಪರಶುರಾಮ ರಾವಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net