ಕಾನೂನು ಕಾಲೇಜಿನಲ್ಲಿ ಸಂಧಾನ ಸ್ಪರ್ಧೆ

IMG_20240727_205014_548.jpg
Published on

ಹುಬ್ಬಳ್ಳಿ: ನಗರದ ಕೆಎಲ್ಇ ಸಂಸ್ಥೆಯ ಜಿ.ಕೆ. ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಎರಡು ದಿನದ ದ್ವೀತಿಯ ರಾಷ್ಟ್ರೀಯ ಸಂಧಾನ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ವಿವಿಧೆಡೆಯಿಂದ 24 ತಂಡಗಳು ಭಾಗವಹಿಸಿವೆ.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂತಿರ್ ಮತ್ತು ಮುಂಬೈನ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯ ಮಂಡಳಿಯ ಅಧ್ಯಾಧಿಕಾರಿ ಪಿ.ಎಸ್. ದಿನೇಶಕುಮಾರ, ಪರ್ಯಾಯ ವಿವಾದ ಪರಿಹಾರ ಪದ್ಧತಿಯಾದ ಸಂಧಾನದ ಮುಖಾಂತರ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬಹುದು. ಇಂತಹ ಶಾಂತಿಯುತ ನ್ಯಾಯ ಪರಿಹಾರ ಜನರ ಆಶೋತ್ತರವಾಗಿದೆ. ಹಾಗಾಗಿ ಇದು ಬಹಳ ಮಹತ್ವದ್ದು ಎಂದರು.

ವೃತ್ತಿ ಜೀವನದಲ್ಲಿಯೂ ಮುಂದೆ ನ್ಯಾಯಾಲಯದ ನಿಯಮಿತ ಕಾರ್ಯವಿಧಾನಗಳ ಹೊರತಾಗಿ ಇಂತಹ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ಮಾಡಬೇಕೆಂದು ವಿದ್ಯಾಥಿರ್ಗಳಿಗೆ ಸಲಹೆ ನೀಡಿದರು.

ಪಣಜಿಯ ಸಹ ಪ್ರಾಧ್ಯಾಪಕ ಡಾ. ಬಿ.ಎಸ್. ಪಾಟೀಲ, ವಕೀಲ ಗಂಗಾಧರ ಹೊಸಕೇರಿ ಅತಿಥಿಗಳಾಗಿದ್ದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕೆಎಲ್ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಜೆ.ಎಂ. ಮಲ್ಲಿಕಾರ್ಜುನಯ್ಯ ಮಾತನಾಡಿ, ವಕೀಲರು ಸಮಾಜದ ಇಂಜಿನಿಯರ್ ಇದ್ದಂತೆ ಹಾಗೂ ಕಾನೂನು ಜ್ಞಾನವು ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಪ್ರಾಂಶುಪಾಲ ಡಾ. ಜ್ಞಾನೇಶ್ವರ ಚೌರಿ ಪರಿಚಯಿಸಿದರು. ಡಾ. ಶಾರದಾ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net