ಅಮೆರಿಕ ಕಂಪನಿ ಜತೆ ಕಂಬಳಿ ಲಾ ಕಾಜೇಜ್ ಒಡಂಬಡಿಕೆ

22 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯವು ಉದ್ಯೋಗಾವಕಾಶ ದೃಷ್ಟಿಯಿಂದ ಅಮೆರಿಕದ ಸ್ಲೆರಾ ವಿಡಿಎಂಎಸ್ ಕಂಪನಿ ಜತೆ ಇತ್ತೀಚೆಗೆ ಒಡಂಬಡಿಕೆ ಮಾಡಿಕೊಂಡಿತು.

ನಗರದ ಆಲೂರು ವೆಂಕಟರಾವ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಲೆರಾ ವಿಡಿಎಂಎಸ್ ಪರವಾಗಿ ವ್ಯವಸ್ಥಾಪಕ ಮನೀಶ ಸಾಲಿಯಾನಾ ಹಾಗೂ ಲಾ ಕಾಲೇಜ್ ಪ್ರಾಚಾರ್ಯೆ ಡಾ. ಎಸ್.ಆರ್. ಮಂಜುಳಾ ಸಹಿ ಹಾಕಿದರು.

ಕಾನೂನು ಪದವಿಯ ನಂತರ ನ್ಯಾಯವಾದಿ, ನ್ಯಾಯಾಧೀಶರಾಗುವ ಅವಕಾಶಗಳ ಜತೆಗೆ ಜಾಗತಿಕ ಮಟ್ಟದಲ್ಲೂ ಪ್ರತಿಭೆ ಪ್ರದರ್ಶಿಸಲು ಅನುಕೂಲವಾಗುವಂಥ ಮೊದಲ ಹೆಜ್ಜೆ ಇದಾಗಿದೆ. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಕಾರ್ಪೋರೇಟ್ ರಂಗದಲ್ಲಿ ಉದ್ಯೋಗ ಪಡೆಯಲು ಮಾರ್ಗ ತೆರೆದಂತಾಗಿದೆ.

ಅತಿಥಿಯಾಗಿದ್ದ ಹಿರಿಯ ವಕೀಲ ಎ.ಸಿ. ಚಾಕಲಬ್ಬಿ ಮಾತನಾಡಿ, ವಿದ್ಯಾರ್ಥಿಗಳು ಜಾಗತಿಕ ಕಾರ್ಪೋರೇಟ್ ವಲಯಗಳಲ್ಲೂ ಸಾಧನೆ ಮಾಡಿ ಬದುಕು ರೂಪಿಸಿಕೊಳ್ಳಲು ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು ಉತ್ತಮ ಅವಕಾಶ ಕಲ್ಪಿಸಿದೆ ಎಂದರು.

ಪ್ರಾಚಾರ್ಯೆ ಡಾ. ಎಸ್.ಆರ್. ಮಂಜುಳಾ, ಕವಿವಿ ಸಿಂಡಿಕೇಟ್ ಸದಸ್ಯ ರಾಬರ್ಟ್ ದದ್ದಾಪುರಿ, ಬಾರ್ ಕೌನ್ಸಿಲ್ ಸದಸ್ಯ ವಿ.ಡಿ. ಕಾಮರೆಡ್ಡಿ, ವಕೀಲ ಕೆ.ಎಸ್. ಕೋರಿಶೆಟ್ಟರ ಉಪಸ್ಥಿತರಿದ್ದರು. ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net