ಕಾನೂನು ವಿವಿಯಲ್ಲಿ ಬಸವ ಜಯಂತಿ

12Navanagar Basava New 010
Published on

ಹುಬ್ಬಳ್ಳಿ : ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಂದು ಜಗಜ್ಯೋತಿ ಶ್ರೀ ಬಸವಣ್ಣನವರ 891 ನೇಯ ಜಯಂತಿ ಆಚರಣೆ ಮಾಡಲಾಯಿತು.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು, ಬಸವಣ್ಣನವರ ಕಾಯಕದ ತತ್ವ, ಸಮಾನತೆಯ ನಿಷ್ಠೆ ಹಾಗೂ 12ನೇ ಶತಮಾನದ ಶರಣ ಸಂಪ್ರದಾಯದ ಸಮಾಜ ಸುಧಾರಣೆಯ ಕಾರ್ಯಗಳನ್ನು ಸ್ಮರಿಸಿದರು.

ಅಸ್ಪಶ್ಯತೆ, ಸಾಮಾಜಿಕ ಬಹಿಷ್ಕಾರ ಹಾಗೂ ಜಾತೀಯತೆಗಳನ್ನು ಹೊಡೆದು ಹಾಕಿ, ಮೂಢ ನಂಬಿಕೆಗಳ ವಿರುದ್ಧ ಹೋರಾಡಿ, ಸಮಾಜವನ್ನು ಸುಧಾರಿಸಲು ಒಬ್ಬ ಸಮಾಜ ಸುಧಾಕರಾಗಿ ಅವತರಿಸಿದ ಮಹಾನ್ ಹೋರಾಟಗಾರ ಜಗಜ್ಯೋತಿ ಬಸವೇಶ್ವರರು ಎಂದು ಹೇಳಿದರು.

ವಿಶ್ರಾಂತ ದೈಹಿಕ ನಿರ್ದೇಶಕ ಪ್ರೊ. ಸುಂದರಾಜ ಅರಸ, ವಿಶೇಷಾಧಿಕಾರಿ ಐ.ಬಿ. ಬಿರಾದಾರ, ಸಹ ಪ್ರಾಧ್ಯಾಪಕ ಮೋಹನ ಆರ್., ಗಿರಿಶಗೌಡ ಪಾಟೀಲ, ಹನುಮಂತಪ್ಪ ತಳವಾರ, ದೀಪಾ ಗೋತಲಿಯಾರ, ಮಂಜಣ್ಣ ಜಂಗವಾಡ ಹಾಗೂ ಇತರರು ಉಪಸ್ಥಿತರಿದ್ದರು.

ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಹಾಗೂ ಎನ್.ಐ.ಸಿ. ಸಂಯೋಗದೊಂದಿಗೆ ಆರಂಭಿಸಿರುವ ಶಿಬಿರದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net