

ಮಂಗಳೂರು : ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಗಳೂರು ವಕೀಲರ ಸಂಘದ ವತಿಯಿಂದ ನಗರದ ಬಲ್ಮಠದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಅಭಯ್ ಧನ್‌ಪಾಲ್ ಚೌಗಲ ಮಾತನಾಡಿ ‘ ದೇಶಾದ್ಯಂತ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತದೆ. ಮಕ್ಕಳಿಂದ ಹಿಡಿದು ಸಮಾಜದ ದುರ್ಬಲ ವರ್ಗದ ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶವಿದೆ. ವಿದ್ಯಾರ್ಥಿಗಳಿಗೆ ಪ್ರಮುಖ ಕಾನೂನು ಸೇವೆಗಳ ಬಗ್ಗೆ ಅರಿವು ಅಗತ್ಯ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶೋಭಾ ಬಿ.ಜಿ. ಕಾನೂನು ಪ್ರಾಧಿಕಾರದ ಮೂಲಕ ಉಚಿತವಾಗಿ ದೊರೆಯುವ ಕಾನೂನು ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಕಾನೂನು ಅಭಿರಕ್ಷಕ ವಾಸುದೇವ ಗೌಡ , ಉಪಮುಖ್ಯ ಕಾನೂನು ಅಭಿರಕ್ಷಕ ಶುಕರಾಜ್ ಎಸ್ ಕೊಟ್ಟಾರಿ,
ಸಹಾಯಕ ಕಾನೂನು ಅಭಿರಕ್ಷಕರಾದ ಸ್ವಾತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪನ್ಯಾಸಕರಾದ ಉಮೇಶ ಕೆ. ಆರ್, ಅಶೋಕ ಭಂಡಾರಿ, ಸಂತೋಷ ಸಿ, ಪ್ರೇಮಲತ, ಸೌಜನ್ಯ, ಪ್ರಭಾಕರ ಎಸ್ ಬಿ, ಬಾಲಕೃಷ್ಣ ಡಿ, ಶಕುಂತಳ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ವನಿತ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭಾಷ ಉಪನ್ಯಾಸಕಿ ಶ್ರೀಮತಿ ಯಶೋಧ ಕೆ. ವಂದಿಸಿದರು. ಆಂಗ್ಲಭಾಷ ಉಪನ್ಯಾಸಕಿ ಸ್ಮಿತಾ ಎ. ಕಾರ್ಯಕ್ರಮ ನಿರೂಪಿಸಿದರು.