

ಮೈಸೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಪೊಲೀಸರ ಮೇಲೆ ಯಾರಿಗೂ ಭಯ ಇಲ್ಲದ ವಾತಾವರಣ ನಿರ್ಮಾಣ ವಾಗಿದೆ. ನಗರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿರುವುದು ಅತ್ಯಂತ ಹೇಂು ಕೃತ್ಯವಾಗಿದ್ದು, ಇದನ್ನು ಖಂಡಿಸಲು ಪದಗಳೇ ಇಲ್ಲ ಎಂದು ಸಂಸದ ಂುದುವೀರ್ ಕೃಷ್ಣದತ್ತ ಚಾಮರಾಜ ಒಡೆಂುರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿರುವ ಪರಿಣಾಮ ಜಿಲ್ಲೆಯಲ್ಲೂ ಆಡಳಿತ ಹಳಿತಪ್ಪಿದೆ. ಮುಖ್ಯಮಂತ್ರಿ ಸಿದ್ದರಾಮಂ್ಯು ಚುನಾವಣೆ ಸಂದರ್ಭದಲ್ಲಿ ವಾತ್ರ ತವರು ಜಿಲ್ಲೆ ಬಗ್ಗೆ ಮಾತನಾಡುತ್ತಾರೆ. ಆದರೆ, ಉಳಿದ ಸಂದರ್ಭದಲ್ಲಿ ಜಿಲ್ಲೆಯನ್ನು ಮರೆಯುತ್ತಾರೆ. ಪೊಲೀಸರು ಎಚ್ಚರ ವಹಿಸಿದ್ದರೆ ನಗರದಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ತಪ್ಪಿಸಬಹುದಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಸರಾ ಸಂದರ್ಭ ವ್ಯಾಪಾರ ಮಾಡಲು ವಿವಿಧ ಕಡೆಯಿಂದ ಜನರು ಆಗಮಿಸುತ್ತಾರೆ. ಅವರು ಪ್ರತಿ ವರ್ಷ ಬರುವ ವಿಚಾರ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಸರ್ಕಾರವೇ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿತ್ತು. ದಸರಾ ಸಂದರ್ಭ ನಗರಕ್ಕೆ ವ್ಯಾಪಾರಕ್ಕೆ ಯಾರೆಲ್ಲ ಆಗಮಿಸುತ್ತಾರೆ? ಅವರು ಎಲ್ಲಿ ಉಳಿದುಕೊಳ್ಳುತ್ತಾರೆ ಎಂಬ ಕನಿಷ್ಠ ಮಾಹಿತಿಯಾದರೂ ಪೊಲೀಸ್ ಇಲಾಖೆಯ ಬಳಿ ಇರಬೇ ಕಾಗಿತ್ತು. ಆದರೆ, ಈ ಬಗ್ಗೆ ನಿರ್ಲಕ್ಷೃ ವಹಿಸಿದ ಪರಿಣಾಮ ಅಮಾಯಕ ಹೆಣ್ಣು ಮಗು ಹತ್ಯೆಗೀಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.