

ಚಿತ್ರದುರ್ಗ: ಸಾಮೂಹಿಕ ಕಲ್ಯಾಣ ಮಹೋತ್ಸವದಿಂದ ಬಡವರ ಕಲ್ಯಾಣವಾಗಿದೆ. ಬಡವರ ಬಂಧುವಾಗಿರುವ ಶ್ರೀ ಮುರುಘಾಮಠ ಭಾವೈಕ್ಯದ ಕೇಂದ್ರವೂ ಆಗಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವರದಕ್ಷಿಣೆ ಎನ್ನುವುದು ಸಾಮಾಜಿಕ ಪಿಡುಗಾಗಿದೆ. ವರದಕ್ಷಿಣೆ ತೆಗೆದುಕೊಳ್ಳುವವರು ಆದರ್ಶ ವ್ಯಕ್ತಿಗಳಾಗಲು ಸಾಧ್ಯವಿಲ್ಲ.
ಅದ್ದೂರಿ ಮದುವೆಗಳಿಗೆ ಕಡಿವಾಣ ಹಾಕಬೇಕು. ಸಮ ಸಮಾಜ ನಿರ್ಮಾಣವಾಗಬೇಕು. ಸಂಸಾರದಲ್ಲಿ ದಂಪತಿ ಮಧ್ಯೆ ಪ್ರತಿಷ್ಠೆ ಇ ಣುಕದಂತೆ ಜಾಗ್ರತೆ ವಹಿಸಿ, ಸದಾ ಪ್ರೀತಿಯಿಂದ ನೆಮ್ಮದಿಯಿಂದ ಜೀವನ ಸಾಗಿಸಬೇಕು. ನಂಬಿಕೆ ಎಂಬ ಔಷಧ ನಮ್ಮಲ್ಲಿರಬೇಕೆಂದರು. ಜಗಳೂರಿನ ಗವಿಸಿದ್ದೇಶ್ವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಯಾವುದೇ ಜಾತಿಭೇದ ಇಲ್ಲದೆ ಮುರುಘಾಮಠ ಸಾಮೂ ಹಿಕ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ. ದಾಂಪತ್ಯದ ಬದುಕಿನಲ್ಲಿ ಶಾಂತಿ ಇರಬೇಕು. ಹೊಂದಾಣಿಕೆ, ಅನ್ಯೋ ನ್ಯತೆ ಮುಖ್ಯ. ಪರಸ್ಪರ ಅರಿತು ಜೀವನ ಸಾಗಿಸಬೇಕೆಂದರು.
ಸಮ್ಮುಖ ವಹಿಸಿದ್ದ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ದೀನ ದಲಿತರು, ಮೇಲ್ವರ್ಗ ಮತ್ತು ಕೆಳವರ್ಗದವರು ಜತೆಗೆ ಕುಳಿತು ವಿವಾಹವಾಗುವ ಮೂಲಕ ಅಸ್ಪಶ್ಯತೆ ನಿವಾರಣೆಯಾಗಬೇಕೆಂಬುದು ಸಾಮೂಹಿಕ ಕಲ್ಯಾಣ ಮಹೋತ್ಸವದ ಉದ್ದೇಶ. 33 ವರ್ಷಗಳ ಕಾಲ ನಿರಂತರ ವಿವಾಹ ಕಾರ‌್ಯಕ್ರಮ ಏರ್ಪಡಿಸಿಕೊಂಡು ಬರುತ್ತಿರುವುದು ಸುಲಭದ ಮಾತಲ್ಲ ಎಂದರು.
ಸತ್ಯ ಹೇಳಿದ್ದರಿಂದ ಅನೇಕ ದಾರ್ಶನಿಕರು ನೋವು ಅನುಭವಿಸಿದರು. ಸೂರ‌್ಯನನ್ನು ಮೋಡ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯ ಯಾ ವಾಗಲೂ ಉರಿಯುವ ಸೂರ‌್ಯನಿದ್ದಂತೆ. ಇಡೀ ರಾಜ್ಯ, ದೇಶಕ್ಕೆ ನೀತಿಬೋಧನೆಯನ್ನು ಹೇಳಿಕೊಟ್ಟ ಮಠ, ಶಕ್ತಿಪೀಠವಾಗಿದೆ ಎಂದರು.
ಇಂದು ಅಂತಧರ್ಮ ಸೇರಿ 5 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಪೈಲ್ವಾನ್ ತಿಪ್ಪೇಸ್ವಾಮಿ, ಜ್ಞಾನಮೂರ್ತಿ ಮೊದಲಾದವರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವಲಿಂಗ ದೇವರು ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.