ಅಧ್ಯಕ್ಷರಾಗಿ ಲಾವಣ್ಯಾ ಅವಿರೋಧ ಆಯ್ಕೆ

06M.D.R.2
ಮದ್ದೂರು ತಾಲೂಕಿನ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಸಿ ಲಾವಣ್ಯ ಅವರನ್ನು ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಅಭಿನಂದಿಸಿದರು. ಸುರೇಶ್, ಪ್ರಕಾಶ್, ಚಿಕ್ಕಹೈದ ಶೆಟ್ಟಿ, ಬಾಬು, ರಾಮು, ಎಸ್.ಎಂ. ಸತೀಶ್, ಹೇಮಾ, ರಾಧ, ಮಣಿ, ನವೀನ್, ಪ್ರೀತಮ್, ಮುಖಂಡರಾದ ರಾಜೇಂದ್ರ, ಸುಧೀರ್, ಲೋಹಿತ್ ಇದ್ದರು.
Published on

ಮದ್ದೂರು: ತಾಲೂಕಿನ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಸಿ.ಲಾವಣ್ಯಾ, ಉಪಾಧ್ಯಕ್ಷರಾಗಿ ಎಸ್.ಎಲ್.ಶಂಕರ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇಬ್ಬರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಆಶಾ ಅವರು ಆಯ್ಕೆ ಘೋಷಣೆ ಮಾಡಿದರು.

ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಅವರು ನೂತನ ಅಧ್ಯಕ್ಷೆ ಎಂ.ಲಾವಣ್ಯಾ ಅವರನ್ನು ಅಭಿನಂದಿಸಿ ಮಾತನಾಡಿ, 1976ರಿಂದ ಇಲ್ಲಿಯವರೆಗೆ ಸೋಮನಹಳ್ಳಿ ಎಂಪಿಸಿಎಸ್‌ಗೆ ಮಹಿಳೆಯರು ಅಧ್ಯಕ್ಷರಾಗಿರಲಿಲ್ಲ. ಈ ಬಾರಿ ಎಂ.ಸಿ.ಲಾವಣ್ಯ ಪ್ರಥಮ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ರೈತರಿಗೆ ಮತ್ತು ಸಹಕಾರ ಸಂಘದ ಷೇರುದಾರರಿಗೆ ಅನುಕೂಲವಾಗುವಂತೆ ನಿರ್ದೇಶಕರ ವಿಶ್ವಾಸ ಪಡೆದು ಸಂಘವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲಿ ಎಂದರು.

ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಸುರೇಶ್, ಪ್ರಕಾಶ್, ಚಿಕ್ಕಹೈದ ಶೆಟ್ಟಿ, ಬಾಬು, ರಾಮು, ಎಸ್.ಎಂ. ಸತೀಶ್, ಹೇಮಾ, ರಾಧಾ, ಮಣಿ, ನವೀನ್, ಗ್ರಾಪಂ ಸದಸ್ಯ ಟಿ.ಸಿ. ಪ್ರೀತಮ್, ಮುಖಂಡರಾದ ರಾಜೇಂದ್ರ, ಸುಧೀರ್, ಲೋಹಿತ್, ಕಾರ್ಯದರ್ಶಿ ಕವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net