ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Launching of various development works
ವಿಜಯಪುರದ ಆದರ್ಶ ನಗರ ಬಡಾವಣೆಯ ಶಿವಾಲಯ ಗುಡಿ ಬಳಿ ನೂತನವಾಗಿ ನಿರ್ಮಿಸಿದ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟನೆಗೊಳಿಸಿದರು.
Published on

ವಿಜಯಪುರ : ನಗರದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ನಗರದ ವಾರ್ಡ್ ನಂ. 5 ರಲ್ಲಿ ಬರುವ ಆದರ್ಶ ನಗರದ ಬಸವಣ್ಣ ದೇವಸ್ಥಾನ ಹತ್ತಿರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ನಂತರ ಆದರ್ಶ ನಗರ ಶಿವಾಲಯ ಗುಡಿ ಹತ್ತಿರ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಗೊಳಿಸಿದರು. ಬಳಿಕ ವಾರ್ಡ್ ನಂ. 5 ಮತ್ತು 6 ರಲ್ಲಿನ ಕೆಸಿ ನಗರ, ಯಲ್ಲಾಲಿಂಗ ನಗರದಿಂದ ನಾಲಾವರೆಗೆ ಮತ್ತು ಇತರ ಅವಶ್ಯಕ ಸ್ಥಳಗಳಲ್ಲಿ 1 ಕೋಟಿ ರೂ. ಮೊತ್ತದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಶಿರೂರ ಕಾಲನಿಯ ಕೆಸಿ ನಗರದ ಹನುಮಾನ ಗುಡಿ ಹತ್ತಿರ ಭೂಮಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲೇ ಕೆಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು. ಪಾಲಿಕೆ ಸದಸ್ಯರಾದ ಎಂ.ಎಸ್. ಕರಡಿ, ಮಳುಗೌಡ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net