ಆಧುನಿಕ ತಂತ್ರಜ್ಞಾನದಿಂದ ತ್ಯಾಜ್ಯ ಮರುಬಳಕೆ

thyajya
Published on

ಶಿರ್ವ: ವಿದ್ಯುನ್ಮಾನ ತ್ಯಾಜ್ಯಗಳು ಮಣ್ಣು ಮತ್ತು ನೀರನ್ನು ಮಾಲಿನ್ಯಗೊಳಿಸುವ ಮೂಲಕ ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ ಹಾಗಾಗಿ ಆಧುನಿಕ ತಂತ್ರಜ್ಞಾನ ಬಳಸಿ ಈ ತ್ಯಾಜ್ಯಗಳನ್ನು ಮರು ಬಳಕೆ ಮಾಡಿ ಪರಿಸರ ಸಂರಕ್ಷಣೆ ಮಾಡಬಹುದು ಎಂದು ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಹೇಳಿದರು.

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೇತೃತ್ವದಲ್ಲಿ ವಿದ್ಯುನ್ಮಾನ ತ್ಯಾಜ್ಯ ಸಂಗ್ರಹ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ವಿದ್ಯುನ್ಮಾನ ತ್ಯಾಜ್ಯಗಳಿಂದ ಉಂಟಾಗುವ ಪರಿಣಾಮದ ಬಗ್ಗೆ ಬೀದಿಯಲ್ಲಿ ಪಥ ಸಂಚಲನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಸಂಗ್ರಹಿಸಲಾದ ವಿದ್ಯುನ್ಮಾನ ತ್ಯಾಜ್ಯಗಳನ್ನು ಮರುಬಳಕೆ ಕೇಂದ್ರವಾದ ದಿಶಾನ್ ಎಂಟರ್‌ಪ್ರೈಸಸ್‌ಗೆ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net