ಸೋಮವಾರದಿಂದ ಹಸಿರುಮಕ್ಕಿ ಲಾಂಚ್ ಸೇವೆ ಪುನರಾರಂಭ

9hos1 hasirumakki
ಸಂಪರ್ಕಕ್ಕೆ ಸಜ್ಜುಗೊಂಡ ಲಾಂಚ್.
Published on

ಹೊಸನಗರ: ಶರಾವತಿ ಹಿನ್ನೀರಿನ ಪ್ರಮಾಣ ಇಳಿಕೆಯಾದ ಕಾರಣ ಸ್ಥಗಿತಗೊಳಿಸಿದ್ದ ಹಸಿರುಮಕ್ಕಿ ಲಾಂಚ್ ಸೇವೆ ಸೋಮವಾರದಿಂದ ಮತ್ತೆ ಪುನರಾರಂಭವಾಗಲಿದೆ.

ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಹಿನ್ನೀರು ಪ್ರದೇಶದಲ್ಲಿ ನೀರು ಏರಿದ್ದು ಲಾಂಚ್ ಸಂಪರ್ಕ ಸಾಧಿಸಲು ಪೂರಕವಾಗಿದೆ. ಹಸಿರುಮಕ್ಕಿ ಭಾಗದಲ್ಲಿ ಹಿನ್ನೀರು ತಳ ಸೇರಿದ ಕಾರಣ ಜೂ.4ರಂದು ಲಾಂಚ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. 35 ದಿನಗಳ ಬಳಿಕ ಮತ್ತೆ ಲಾಂಚ್ ಸಂಪರ್ಕ ಸಿಗುತ್ತಿದೆ.
ಲಾಂಚ್ ಸ್ಥಗಿತ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಮಾರ್ಗದ ಮೂಲಕ ತೆರಳುತ್ತಿದ್ದ ಬಸ್ಸು, ಕಾರು ಇತರ ವಾಹನಗಳು ಹೊಸನಗರ, ನಗರ ಸಂಪೇಕಟ್ಟೆ ಮಾರ್ಗದ ಮೂಲಕ ಸಾಗಬೇಕಿತ್ತು. ಭಾನುವಾರ ಲಾಂಚ್ ಚಾಲಕ ರವಿ ನೇತೃತ್ವದಲ್ಲಿ ತಾಲೀಮು ನಡೆಸಲಾಯಿತು.
ಹಿನ್ನೀರು ಏರಿಕೆಯಾದ ಕಾರಣ ಅಧಿಕಾರಿಗಳ ಸೂಚನೆ ಮೇರೆಗೆ ಸೋಮವಾರದಿಂದ ಲಾಂಚ್ ಸಂಪರ್ಕಕ್ಕೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ನೀರಿನ ಪ್ರಮಾಣ ಆಧರಿಸಿ ಬಸ್ಸು ಸೇರಿದಂತೆ ದೊಡ್ಡ ವಾಹನಗಳಿಗೆ ಆದ್ಯತೆ ನೀಡಲಾಗುವುದು ಎಂದು ಲಾಂಚ್ ಚಾಲಕ ರವಿ ಹಸಿರುಮಕ್ಕಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net