ಜಿಎಂಯು ನ ಅಜ್ಮಾನ್ ಕ್ಯಾಂಪಸ್‌ನಲ್ಲಿ ಈ ಆರು ಪ್ರತ್ಯೇಕ ತರಬೇತಿ ಕೇಂದ್ರಗಳನ್ನು ಒಂದೇ ಸೂರಿನಡಿ ತರಲಾಗಿದೆ. ಇದು ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ಫಿಸಿಯೋಥೆರಪಿ ಹಾಗೂ ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳಿಗೆ ನಿಜ ರೋಗಿಗಳಿಗೆ ಚಿಕಿತ್ಸೆ ನೀಡುವ ಮುನ್ನ, ಯಾವುದೇ ತಪ್ಪುಗಳಿಂದ ರೋಗಿಗಳಿಗೆ ಅಪಾಯವಾಗದಂತಹ ಸುರಕ್ಷಿತ ವಾತಾವರಣದಲ್ಲಿ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ನೆರವಾಗಲಿದೆ.