ಕೋಟಿ ಅರ್ಚನಾ ಸೇವೆಗೆ ಚಾಲನೆ

kum
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ಸೋಮವಾರ ಆರಂಭಗೊಂಡ ಕೋಟಿ ಅರ್ಚನಾ ಸೇವೆಯಲ್ಲಿ ಸಹಸ್ರಾರು ಮಾತೆಯರು ಹಾಗೂ ಮಹನೀಯರು ಪಾಲ್ಗೊಳ್ಳುತ್ತಿದ್ದಾರೆ.

ಬೆಳಗ್ಗೆ ಅಷ್ಟಚಾತ್ವಾರಿಂಶತ್ ನಾರಿಕೇಳ ಗಣಪತಿ ಯಾಗದಲ್ಲಿ ಆನೆಗುಂದಿ ಪ್ರತಿಷ್ಠಾನ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ದೀಪ ಸುರೇಶ್ ಆಚಾರ್ಯ ಕಟಪಾಡಿ, ಆನೆಗುಂದಿ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಕಾನೂನು ಸಲಹೆಗಾರ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು, ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಉಮೇಶ್ ಆಚಾರ್ಯ ಪಡೀಲು, ಶಂಕರಾಚಾರ್ಯ ಕಡ್ಲಾಸ್ಕರ್, ವಿಶ್ವಕರ್ಮ ಒಕ್ಕೂಟ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಬಿ.ಸೂರ್ಯಕುಮಾರ್ ಹಳೆಯಂಗಡಿ, ಶಿಲ್ಪಾ ಜಿ. ಸುವರ್ಣ, ಸತೀಶ್ ಕುತ್ಯಾರು, ಜನಾರ್ದನ ಆಚಾರ್ಯ ಕಳತ್ತೂರು, ದಿನೇಶ್ ಆಚಾರ್ಯ ಪಡುಬಿದ್ರಿ, ವಕೀಲ ಕೆ.ಪ್ರಭಾಕರ ಆಚಾರ್ಯ ಕೋಟೆಕಾರು, ಜಿ.ಟಿ ಆಚಾರ್ಯ ಮುಂಬೈ, ಶ್ರೀಧರ ಜೆ.ಆಚಾರ್ಯ ಕಟಪಾಡಿ, ಪಿ.ವಿ.ಗಂಗಾಧರ ಆಚಾರ್ಯ ಕೊಂಡೆವೂರು, ರಮಾನವೀನ್, ದೀಪಾ ಸುರೇಶ್, ಯಜ್ಞೇಶ್ವರ ಆಚಾರ್ಯ, ಎ.ಗಣೇಶ ಆಚಾರ್ಯ, ಗುರುರಾಜ ಕೆ.ಜೆ.ಆಚಾರ್ಯ, ಗಣೇಶ್ ಆಚಾರ್ಯ ಕೆಮ್ಮಣ್ಣು, ಕೇಶವ ಶರ್ಮಾ, ಲೋಲಾಕ್ಷ ಶರ್ಮ, ಲತಾ ಎಸ್ ಆಚಾರ್ಯ, ಉಷಾ ಜಿ.ಟಿ ಆಚಾರ್ಯ, ಆಶಾ ಉಮೇಶ್ ಆಚಾರ್ಯ, ಆಶಾ ನಾಗರಾಜ ಆಚಾರ್ಯ, ಕವಿತಾ ಹರೀಶ್ ಆಚಾರ್ಯ, ಜನಾರ್ದನ ಆಚಾರ್ಯ ಕನ್ಯಾನ, ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ, ರಾಘವೇಂದ್ರ ಆಚಾರ್ಯ ಉಡುಪಿ, ಸುರೇಶ್ ಆಚಾರ್ಯ ಇರಂದಾಡಿ, ಮನೋಜ್ ಆಚಾರ್ಯ ಮುಂಬೈ, ಉಷಾ ಎಸ್. ಆಚಾರ್ಯ, ದೀಪಾ ಪ್ರಶಾಂತ್, ಶಾಲಿನಿ ಶಿವರಾಮ, ಜ್ಯೋತಿ ರಾಘವೇಂದ್ರ, ಶಾಲಿನಿ ರತ್ನಾಕರ, ಪುಷ್ಪಲತಾ ಎಲ್. ಆಚಾರ್ಯ ಕಂಬಾರು, ಸವಿತಾ ಜಿ. ಆಚಾರ್ಯ ಕೊಂಡೆವೂರು ಭಾಗವಹಿಸಿದ್ದರು. ತಂತ್ರಿ ಅಕ್ಷಯ ಶರ್ಮ ಕಟಪಾಡಿ, ಶ್ರೀ ಸರಸ್ವತಿ ಪೂರ್ವಚಾತ್ರ ಸಂಘದ ಮೌನೇಶ ಶರ್ಮ ಬಾಳಿಲ, ಮನೋಜ್ ಶರ್ಮ, ದುರ್ಗಾ ಪ್ರಸಾದ್ ಶರ್ಮ ಆರಿಕ್ಕಾಡಿ, ಶಿವರಾಜ್ ಶರ್ಮ, ಪ್ರಶಾಂತ್ ಶರ್ಮ, ವಿಕಾಸ್ ಶರ್ಮ ಆಲೂರು, ಪಂಚಮ ಶರ್ಮ ಕೆಮ್ಮಣ್ಣು ಮತ್ತಿತರರು ನೇತೃತ್ವ ವಹಿಸಿದ್ದರು. ಆನೆಗುಂದಿ ಮಹಾ ಸಂಸ್ಥಾನದ ಯುಟ್ಯೂಬ್ ಚಾನಲನ್ನು ಜಗದ್ಗುರುಗಳು ಲೋಕಾರ್ಪಣೆಗೊಳಿಸಿದರು. ಶ್ರೀ ಸರಸ್ವತಿಯಾಗ ಶಾಲೆಯಲ್ಲಿರುವ ಹುಂಡಿ ಕಾಣಿಕೆಯನ್ನು ಶ್ರೀಗಳು ಉದ್ಘಾಟಿಸಿದರು. ಮಂಗಳವಾರ ಮಹಾ ಮೃತ್ಯುಂಜಯ ಹವನ ಮತ್ತು ರುದ್ರಯಾಗ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net