ಪ್ರಥಮ ಜನಪದ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಹುಣಸೂರು ತಾಲೂಕಿನ ಕುಡಿನೀರುಮುದ್ದನಹಳ್ಳಿಯ ದೊಡ್ಡ ಆಲದ ಮರದ ಪ್ರಥಮ ಜಾತ್ರಾ ಮಹೋತ್ಸವಕ್ಕೆ  ವೃಕ್ಷಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಹುಣಸೂರು ತಾಲೂಕಿನ ಕುಡಿನೀರುಮುದ್ದನಹಳ್ಳಿಯ ದೊಡ್ಡ ಆಲದ ಮರದ ಪ್ರಥಮ ಜಾತ್ರಾ ಮಹೋತ್ಸವಕ್ಕೆ ವೃಕ್ಷಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
Published on

ಹುಣಸೂರು: ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ಆಲದ ಮರವೆಂದು ಗುರುತಿಸಲ್ಪಟ್ಟ ತಾಲೂಕಿನ ಬಿಳಿಕೆರೆ ಹೋಬಳಿ ಕುಡಿನೀರು ಮುದ್ದನಹಳ್ಳಿಯ ದೊಡ್ಡ ಆಲದ ಮರದ ಪ್ರಥಮ ಜನಪದ ಜಾತ್ರಾ ಮಹೋತ್ಸವಕ್ಕೆ ವೃಕ್ಷಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಆಲದ ಮರಕ್ಕೆ ಅರ್ಚಕರು ಗಣ್ಯರ ಸಮ್ಮುಖದಲ್ಲಿ ವೃಕ್ಷಪೂಜೆ ನಡೆಸುವ ಮೂಲಕ ಎರಡು ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗಿಸಲಾಯಿತು. ನಂತರ 12 ಗಂಟೆಗೆ ಆಲದ ಮರದ ಆವರಣದಲ್ಲಿರುವ ಪಟ್ಟಲದಮ್ಮ ದೇವಾಲಯದ ಸುತ್ತಮುತ್ತ ಹೆಂಗಳೆಯರು ಬಣ್ಣಬಣ್ಣದ ರಂಗೋಲಿಯೊಂದಿಗೆ ಆಕರ್ಷಕ ಚಿತ್ತಾರದ ರಂಗೋಲಿಯನ್ನು ಬಿಡಿಸಿದರು. 30ಕ್ಕೂ ಹೆಚ್ಚು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಈ ವೇಳೆ ಗ್ರಾಮದ ಯಜಮಾನರು, ಗ್ರಾಪಂವರಿಷ್ಠರು, ಸದಸ್ಯರು, ವಿವಿಧ ಕೋಮಿನ ಮುಖಂಡರು, ಜಾತ್ರಾ ಸಮಿತಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net